Wednesday, June 24, 2026
Homeಕರಾವಳಿಮಂಗಳೂರುಸುಳ್ಯ: ಮಡಿಕೇರಿ ಕಡೆಗೆ, ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದವರನ್ನು ಲಾರಿ ಸಹಿತ ಬಂಧಿಸಿದ ಪೊಲೀಸರು

ಸುಳ್ಯ: ಮಡಿಕೇರಿ ಕಡೆಗೆ, ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದವರನ್ನು ಲಾರಿ ಸಹಿತ ಬಂಧಿಸಿದ ಪೊಲೀಸರು

- Advertisement -
- Advertisement -

ಸುಳ್ಯ; ದಿನಾಂಕ:24.08.2025ರಂದು ಬೆಳಿಗ್ಗೆ, 4 ಲಾರಿಗಳಲ್ಲಿ  ಮುರೂರು ಕಡೆಯಿಂದ ಸುಳ್ಯ ಮಾರ್ಗವಾಗಿ ಮಡಿಕೇರಿ ಕಡೆಗೆ, ಅಕ್ರಮವಾಗಿ ಕೆಂಪುಕಲ್ಲು  ಸಾಗಾಟ ಮಾಡುತ್ತಿರುವ ಬಗ್ಗೆ, ಸುಳ್ಯ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಿಗೆ ಮಾಹಿತಿ ಬಂದ ಮೇರೆಗೆ, ಠಾಣಾ ಸಿಬ್ಬಂದಿಯೊಂದಿಗೆ, ಜಾಲ್ಸೂರು ಗ್ರಾಮದ ಅಡ್ಕಾರು ಬಳಿ ವಾಹನಗಳನ್ನು ತಡೆದು ಪರಿಶೀಲಿಸಿದಾಗ, 04 ಲಾರಿಗಳಲ್ಲಿ ಯಾವುದೇ ಅನುಮತಿಯಿಲ್ಲದೇ, ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿರುತ್ತದೆ.

ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ 4 ಲಾರಿಗಳನ್ನು ಸ್ವಾಧೀನಪಡಿಸಲಾಗಿದ್ದು, ಅವುಗಳ ಮೌಲ್ಯ ಅಂದಾಜು 45 ಲಕ್ಷ ಹಾಗೂ ಒಟ್ಟು 1750 ಕಲ್ಲುಗಳ  ಮೌಲ್ಯ ₹ 43,750 ಆಗಿದ್ದು, ಸದ್ರಿ ಲಾರಿಗಳ ಚಾಲಕರು ಹಾಗೂ ಮಾಲಕರುಗಳ ವಿರುದ್ಧ ಸುಳ್ಯ   ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 91/2025 ಕಲಂ: 303(2) BNS & 4(1) 21MMRD& KARNATAKA MINOR MINERAL CONSISTENT RULE 3.44&66(1) &192(a)IMV Act ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!