Tuesday, May 14, 2024
Homeತಾಜಾ ಸುದ್ದಿಚಾಮುಂಡಿ ಬೆಟ್ಟದಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಸಿದರೆ ದಂಡ; ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೂ ಫೈನ್

ಚಾಮುಂಡಿ ಬೆಟ್ಟದಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಸಿದರೆ ದಂಡ; ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೂ ಫೈನ್

spot_img
- Advertisement -
- Advertisement -

ಮೈಸೂರು: ಚಾಮುಂಡಿ ಬೆಟ್ಟವನ್ನು ಕಸ ಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಚಾಮುಂಡಿ ಬೆಟ್ಟದಲ್ಲಿ ಇಂದಿನಿಂದ ಪ್ಲಾಸ್ಟಿಕ್ ಎಸೆದರೆ 500 ರೂಪಾಯಿ ದಂಡ ವಿಧಿಸಲಾಗುತ್ತಿದ್ದು,
ಚಾಮುಂಡಿ ಬೆಟ್ಟದ ಮಳಿಗೆ ವ್ಯಾಪಾರಸ್ಥರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ‌.‌

ಅಂಗಡಿಯವರು ಮೊದಲ ಬಾರಿ ಪ್ಲಾಸ್ಟಿಕ್ ಎಸೆದಲ್ಲಿ  2,500 ರೂಪಾಯಿ ದಂಡ  ಎರಡನೇ ಬಾರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿ ಮೂರನೇ ಬಾರಿಗೆ ಬಳಸಿದರೆ 10 ಸಾವಿರ ರೂಪಾಯಿ ದಂಡದೊಂದಿಗೆ ಲೈಸನ್ಸ್ ರದ್ದುಗೊಳಿಸಲಾಗುತ್ತದೆ.

ಅರಣ್ಯದ ಒಳಗೆ ತೆರಳಿದರೆ 500 ರೂಪಾಯಿ ದಂಡ,
ನಿರ್ಬಂಧಿತ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ 1 ಸಾವಿರ ರೂಪಾಯಿ ದಂಡ ಬೀಳಲಿದೆ.

ಅಲ್ಲದೇ
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದ್ದು,
ಮದ್ಯ ಸೇರಿದಂತೆ ಇತರೆ ಹಾನಿಕಾರಕ ವಸ್ತು ತೆಗೆದುಕೊಂಡು ಹೋದಲ್ಲಿ 5 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.‌

ಇನ್ನು ಚಾಮುಂಡಿ ಬೆಟ್ಟದಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ನೀಡಿದರೆ 1 ಸಾವಿರ ರೂಪಾಯಿ ದಂಡ ಬೀಳಲಿದೆ.

ಪ್ಲಾಸ್ಟಿಕ್ ನಿಷೇಧ ಕುರಿತು ಇಂದಿನಿಂದಲೇ ಜಾರಿಗೆ ಬರುವಂತೆ ಮೈಸೂರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!