ಬೆಳ್ತಂಗಡಿ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲೋನ್ ಆಪ್ ನಿಂದ ಪಡೆದುಕೊಂಡ ಹಣದಿಂದ ಕಂಪನಿಯ ಬ್ಲಾಕ್ ಮೇಲ್ ಬೆದರಿಕೆಗೆ ಪ್ರಾಣವನ್ನೇ ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ನಕಲಿ ಆಪ್ ಕಂಪನಿಯ ಬೆದರಿಕೆ ಸಂದೇಶದ ಎಕ್ಸ್ಕ್ಲೂಸಿವ್ ಸ್ಕ್ರೀನ್ ಶಾಟ್ ಗಳು ಲಭ್ಯವಾಗಿದೆ.
ಲೋನ್ ಆಪ್ ಗೆ ಯುವಕ ಬಲಿ:
ಮಾಹಿತಿ ಪ್ರಕಾರ ಹಲವು ಆನ್ ಲೈನ್ ಲೋನ್ ಆಪ್ ಕಂಪನಿಯಿಂದ ಲೋನ್ ಪಡೆದಿದ್ದ ಸ್ವರಾಜ್ ಹಂತಹಂತವಾಗಿ ಕಂಪನಿ ಹೆಚ್ಚುವರಿ ಹಣ ವಾಪಸ್ ಪಡೆಯಲು ಬೆದರಿಕೆಗಳನ್ನು ಹಾಕುತ್ತಿತ್ತು. ಸ್ವರಾಜ್ ವಾಟ್ಸಪ್ ನಲ್ಲಿ ಅಕ್ಕನ ಮಗಳ ಡಿಪಿ ಫೋಟೋ ಹಾಕಿದ್ದ.ಇದನ್ನೇ ಬಂಡವಾಳ ಮಾಡಿಕೊಂಡ ಆಪ್ ಕಂಪನಿ ವಿದೇಶದ ವಾಟ್ಸಪ್ ನಂಬರಿನಿಂದ ಸ್ನೇಹಿತರಿಗೆ “ಮಗು ಮಾರಾಟಕ್ಕಿದೆ” (Baby for sale) ಎಂದು ಬರೆದು ವಿದೇಶಿ ನಂಬರ್ ಹಾಕಿ ಸ್ವರಾಜ್ ಸ್ನೇಹಿತರಿಗೆ ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು. ಈ ವಿಚಾರ ಸ್ಬರಾಜ್ ಗೆ ಸ್ನೇಹಿತರು ಮಾಹಿತಿ ನೀಡಿದ್ದರು. ಆಗಸ್ಟ್ 30 ಕ್ಕೆ ಸ್ವರಾಜ್ ತನ್ನ ಬ್ಯಾಂಕ್ ಖಾತೆಯಿಂದ 30,000 ಸಾವಿರ ಹಣ ಡ್ರಾ ಮಾಡಿ ಆಪ್ ಕಂಪನಿಗೆ ಕಟ್ಟಿದ್ದ. ಮತ್ತೆ ಹೆಚ್ಚುವರಿ ಹಣ ನೀಡಲು ಆಪ್ ಕಂಪನಿ ಬೆದರಿಕೆ ಹಾಕುತ್ತಿತ್ತು. ಅದಲ್ಲದೆ ಆಗಸ್ಟ್ 31 ರ ಮಧ್ಯಾಹ್ನ 2 ಗಂಟೆಗೆ ಕೊನೆಯ ಡೆಡ್ ಲೈನ್ ನಿನಗೆ ಎಂದು ಕಂಪನಿ ಸಂದೇಶ ಕಳುಹಿಸಿತ್ತು ಎನ್ನಲಾಗಿದೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಲ್ಲ ಮೂಲಗಳಿಂದ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ಸಿಕ್ಕಿದೆ.
ಘಟನೆ ವಿವರ:
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಬಾಯತ್ಯಾರು ನಿವಾಸಿ ಸ್ವರಾಜ್ (24) ಎಂಬಾತ ಆಗಸ್ಟ್ 31 ರಂದು ಬೆಳಗ್ಗೆ ಪುದುವೆಟ್ಟುವಿನಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅತ್ಯುತ್ತಮ ಕಬಡ್ಡಿ ಆಟಗಾರರಾಗಿದ್ದು. ಉಜಿರೆ ಖಾಸಗಿ ಕಂಪನಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸತೀಶ್ ಪೂಜಾರಿ ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಾಗಿದೆ. ಸ್ವರಾಜ್ ಮೊಬೈಲ್ ಫೋನ್ ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.
ಲೋನ್ ಆಪ್ ಬಗ್ಗೆ ಎಚ್ಚರಿಕೆ ಅಗತ್ಯ:
ಆನ್ ಲೈನ್ ಮೂಲಕ ಲೋನ್ ಆಪ್ ನೀಡುವ ಹಲವು ನಕಲಿ ಕಂಪನಿಗಳಿದ್ದು. ಸುಲಭವಾಗಿ ಕಂಪನಿಯೂ ಕೂಡ ಕೆಲವು ನಿಯಮಗಳಿಗೆ ಓಕೆ ಅಂದ ಮೇಲೆ ಹಣ ನೀಡಿತ್ತಾರೆ ಬಳಿಕ ಹೆಚ್ಚಿನ ಹಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ನಗ್ನ ಫೋಟೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಕೆಲವರು ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಹಲವು ಮಂದಿ ಇಂತಹ ನಕಲಿ ಲೋನ್ ಆಪ್ ನಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹೆಚ್ಚಾಗಿದ್ದು. ಇದರಿಂದ ಯಾರು ಕೂಡ ನಕಲಿ ಲೋನ್ ಆಪ್ ಗೆ ಬಲಿಯಾಗಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡುತ್ತಿದೆ.