Wednesday, May 1, 2024
Homeತಾಜಾ ಸುದ್ದಿಸೆಪ್ಟಂಬರ್ 4 ರಂದು ರಾಜ್ಯದ ಬರಪೀಡಿತ ತಾಲೂಕುಗಳ ಘೋಷಣೆ

ಸೆಪ್ಟಂಬರ್ 4 ರಂದು ರಾಜ್ಯದ ಬರಪೀಡಿತ ತಾಲೂಕುಗಳ ಘೋಷಣೆ

spot_img
- Advertisement -
- Advertisement -

ಬೆಂಗಳೂರು: ಸೆಪ್ಟಂಬರ್ 4 ರಂದು ರಾಜ್ಯದ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಗುವುದು ಎಂದು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.

ಸೆ.4ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿ ಬರಪೀಡಿತ ತಾಲೂಕುಗಳನ್ನು ಘೋಷಿಸುತ್ತೇವೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.

ಜೂನ್ ನಿಂದ ಆಗಸ್ಟ್ ವರೆಗೆ ನಿರೀಕ್ಷಿತ ಮಳೆ ಆಗಿಲ್ಲ. ಶೇಕಡಾ 26 ರಷ್ಟು ಮಳೆ ಕಡಿಮೆ ಆಗಿದೆ.ಇದರಿಂದ ಮಣ್ಣಿನ ತೇವಾಂಶ ಕಳೆದು ಒಣಹವೆ ಇದೆ. ರಾಜ್ಯದಲ್ಲಿ 120 ರಿಂದ 150 ತಾಲೂಕುಗಳಲ್ಲಿ ಒಣಹವೆ ಕಾಣಿಸಿಕೊಂಡಿದೆ.ಕೃಷಿಯ ಮಣ್ಣು ತೇವಾಂಶ ಕಳೆದುಕೊಂಡಿದೆ. ಸರ್ಕಾರವು ಜಿಲ್ಲೆಗಳಿಂದ ಮಣ್ಣಿನ ವರದಿಯನ್ನು ಪಡೆಯುತ್ತಿದೆ. ಬರಪೀಡಿತ ಪ್ರದೇಶಗಳ ಘೋಷಣೆಗೆ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಮತ್ತು ರಾಜ್ಯ ನೀಡಿರುವ ಮಾರ್ಗಸೂಚಿಗಳನ್ನು ಪರಿಗಣಿಸಲಾಗುವುದು ಎಂದಿದ್ದಾರೆ.

- Advertisement -
spot_img

Latest News

error: Content is protected !!