ಮಂಗಳೂರು: ಮಂಗಳೂರು: ಶಾಲಾ ಬಸ್ಸಿಗೆ ಲಾರಿ ಡಿಕ್ಕಿಯಾಗಿ ಎಲ್‌ಕೆಜಿ ವಿದ್ಯಾರ್ಥಿನಿಗೆ ಗಾಯವಾಗಿರುವ ಘಟನೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 73ರ ಬಿಕರ್ನಕಟ್ಟೆ ಬಳಿ ನಡೆದಿದೆ.
ದ್ಯಾರ್ಥಿಗಳನ್ನು ಮನೆಗೆ ಬಿಡುವ ನಿಟ್ಟಿನಲ್ಲಿ ಚಾಲಕ ಇಬ್ರಾಹಿಂ ಅವರು ಬಸ್ಸು ಚಲಾಯಿಸಿಕೊಂಡು ಬಿಕರ್ನಕಟ್ಟೆಗೆ ಬಂದಿದ್ದಾರೆ.ಅಲ್ಲಿಂದ ದತ್ತನಗರದಲ್ಲಿ ಇಳಿಯಲಿದ್ದ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಬಿಟ್ಟು ಮತ್ತೆ ಬಿಕರ್ನಕಟ್ಟೆ ರಾ.ಹೆ. 73 ಅನ್ನು ತಲುಪುತ್ತಿದ್ದಂತೆ ನಂತೂರು ಕಡೆಯಿಂದ ಲಾರಿ ಚಾಲಕ ಸಾಜಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿಗೆ ಢಿಕ್ಕಿ ಹೊಡೆಸಿದ್ದಾನೆ.
ಪರಿಣಾಮ ಬಸ್ಸಿನ ಬಲಭಾಗ ಜಖಂಗೊಂಡಿದ್ದು, ಇಬ್ರಾಹಿಂ ಅವರ ತಲೆಯ ಬಲಬದಿಗೆ ರಕ್ತಗಾಯ, ಬಲಕೈಯ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದೆ. ಬಸ್ಸಿನಲ್ಲಿದ್ದ ಎಲ್‌ಕೆಜಿ ವಿದ್ಯಾರ್ಥಿನಿ ಖತೀಜಾ ಅವರಿಗೆ ತಲೆಗೆ ತರಚಿದ ರೀತಿಯ ಗಾಯವಾಗಿದೆ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.