Friday, March 29, 2024
Homeಪ್ರಮುಖ-ಸುದ್ದಿಮದ್ಯ ಪ್ರಿಯರ ಮನೆಗೆ ಬಾಗಿಲಿಗೆ ಬರುತ್ತಾ ಮದಿರೆ? ರಾಜ್ಯದಲ್ಲಿ ಆನ್ಲೈನ್ ಮೂಲಕ ಮದ್ಯ ಮಾರಾಟ?

ಮದ್ಯ ಪ್ರಿಯರ ಮನೆಗೆ ಬಾಗಿಲಿಗೆ ಬರುತ್ತಾ ಮದಿರೆ? ರಾಜ್ಯದಲ್ಲಿ ಆನ್ಲೈನ್ ಮೂಲಕ ಮದ್ಯ ಮಾರಾಟ?

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಆನ್​ಲೈನ್​ ಮೂಲಕ ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡುವ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಕರೊನಾ​ ಲೌಕ್​ಡೌನ್​ ವೇಳೆ ಆನ್​ಲೈನ್​ ಮೂಲಕ ಮದ್ಯ ಸರಬರಾಜು ಮಾಡುವ ಕುರಿತು ಆಯಾ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್​ ಸಲಹೆ ನೀಡಿತ್ತು. ಅದರಂತೆ, ಕೆಲ ರಾಜ್ಯಗಳಲ್ಲಿ ಅನ್​ಲೈನ್​ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.

ಇದೀಗ ಕರ್ನಾಟಕದಲ್ಲೂ ಆದಾಯ ನಷ್ಟ ಸರಿದೂಗಿಸಿಕೊಳ್ಳಲು ಆನ್​ಲೈನ್​ನಲ್ಲಿ ಮದ್ಯ ಮಾರಾಟದ ಬಗ್ಗೆ ರಾಜ್ಯ ಸರ್ಕಾರವೂ ಗಂಭೀರ ಚರ್ಚೆ ನಡೆಸುತ್ತಿದೆ.

ರಾಜ್ಯದಲ್ಲಿ ವೈನ್​ಶಾಪ್​, ಕ್ಲಬ್​, ಸ್ಟಾರ್​ ಹೋಟೆಲ್​, ಬಾರ್​ ಆಯಂಡ್​ ರೆಸ್ಟೋರೆಂಟ್​, ಎಂಎಸ್​ಐಎಲ್​, ವೈನ್​ ಬೋಟಿಕ್​, ಮೈಕ್ರೊ ಬ್ರಿವರಿ, ಮಿಲಿಟರಿ ಕ್ಯಾಂಟೀನ್​ ಸ್ಟೋರ್​ ಸೇರಿ ಒಟ್ಟು 11,037 ಮದ್ಯದಂಗಡಿಗಳಿವೆ. ಇದರಿಂದ ಪ್ರತಿ ವರ್ಷ 22,700 ಕೋಟಿ ರೂ. ರಾಜಸ್ವ ಸಂಗ್ರಹ ಆಗುತ್ತಿದೆ. ಒಂದು ವೇಳೆ ಮದ್ಯಮಾರಾಟಕ್ಕೆ ಆನ್​ಲೈನ್​ ವ್ಯವಸ್ಥೆ ಜಾರಿಗೆ ಬಂದರೆ ಸರ್ಕಾರಕ್ಕೆ ಪ್ರತಿ ವರ್ಷ 2,500 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. ಹೀಗಾಗಿ, ಆನ್​ಲೈನ್​ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.

- Advertisement -
spot_img

Latest News

error: Content is protected !!