Thursday, May 9, 2024
Homeಕರಾವಳಿಬೆಳ್ತಂಗಡಿ : ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಳ‌ ಪರಿಶೀಲನೆ; ಲಾಯಿಲ&ಮೇಲಂತಬೆಟ್ಟು ಜಾಗದಲ್ಲಿ ವಿಮಾನ ನಿಲ್ದಾಣವಾಗುವ ಸಾಧ್ಯತೆ

ಬೆಳ್ತಂಗಡಿ : ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಳ‌ ಪರಿಶೀಲನೆ; ಲಾಯಿಲ&ಮೇಲಂತಬೆಟ್ಟು ಜಾಗದಲ್ಲಿ ವಿಮಾನ ನಿಲ್ದಾಣವಾಗುವ ಸಾಧ್ಯತೆ

spot_img
- Advertisement -
- Advertisement -

ಬೆಳ್ತಂಗಡಿ : ಸಮಾರಂಭವೊಂದರಲ್ಲಿ ವಸತಿ ಸಚಿವ ವಿ. ಸೋಮಣ್ಣ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಂದು ವಾರದಲ್ಲಿ ಡಿ.ಪಿ.ಆರ್ ಮಾಡುವುದಾಗಿ ಘೋಷಿಸಿದ್ದು ಈ ಬಗ್ಗೆ ಅಧಿಕಾರಿಗಳು  (ಇಂದು) ಮಂಗಳವಾರ ಜಾಗ ಗುರುತಿಸುವಿಕೆ ಕಾರ್ಯ ನಡೆಸಿದರು.

ಧರ್ಮಸ್ಥಳ ಗ್ರಾಮ ಹಾಗೂ ಲಾಯಿಲ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಕಾರ್ಯ ನಡೆದಿದ್ದು ಬೆಳ್ತಂಗಡಿಯ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಲಾಯಿಲ ಹಾಗೂ ಮೇಲಂತಬೆಟ್ಟು ಗಡಿ ಭಾಗಗಳಲ್ಲಿ ಅಧಿಕಾರಿಗಳು ಸ್ಥಳ ವೀಕ್ಷಣೆಯನ್ನು ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ 100 ಎಕರೆಯಷ್ಟು ಜಾಗ ಬೇಕಾಗಿದ್ದು ಅದರ ಸುತ್ತಮುತ್ತ ಬೆಟ್ಟ ಗುಡ್ಡಗಳು ಅಡ್ಡ ಬಾರದಂತೆ ಜಾಗ ಗುರುತಿಸಬೇಕಾಗಿರುವುದರಿಂದ ಈ ಪ್ರದೇಶದಲ್ಲೂ ವೀಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದರ ವಿವರಗಳನ್ನು ಸಂಬಂಧಪಟ್ಟ ಇಲಾಖೆಗೆ ವರದಿ ಮಾಡಲಾಗುತ್ತದೆ.

ಲಾಯಿಲ ಗ್ರಾಮ ಮತ್ತು ಮೇಲಂತಬೆಟ್ಟು ಗ್ರಾಮಕ್ಕೆ ಸೇರಿರುವ ಸರ್ವೆ ನಂಬರ್ 158 ರಲ್ಲಿರುವ 608 ಎಕರೆ ಸರಕಾರಿ ಜಾಗ ಹಾಗೂ ಧರ್ಮಸ್ಥಳ ಗ್ರಾಮ ಮತ್ತು ಕಲ್ಮಂಜ ಗ್ರಾಮಕ್ಕೆ ಸೇರಿದ ನೀರಚಿಲುಮೆಯ ಬಳಿ ಸರ್ವೆ ನಂಬರ್ 57 ರಲ್ಲಿರುವ 45 ಎಕರೆ ಸರಕಾರಿ ಜಾಗ ಇದ್ದು ಇದನ್ನು ಪರಿಶೀಲನೆ ಮಾಡಿದ ಅಧಿಕಾರಿಗಳ ಮೂಲಗಳ ಪ್ರಕಾರ ಲಾಯಿಲ ಗ್ರಾಮ ಮತ್ತು ಮೇಲಂತಬೆಟ್ಟು ಗ್ರಾಮದ 608 ಎಕರೆ ಜಾಗದಲ್ಲಿ 100 ಎಕರೆ ಜಾಗ ಗುರುತಿಸಿ ಮಿನಿ ವಿಮಾನ ನಿಲ್ದಾಣ ಅಗುವ ಸಾಧ್ಯತೆ ಹೆಚ್ಚಾಗಿದೆ.

ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ   ಪೂರ್ವಿ ಮಠ್ ನೇತೃತ್ವದ ಬೆಂಗಳೂರಿನ ಕೆ.ಎಸ್.ಐ.ಐ.ಡಿ.ಸಿ ತಾಂತ್ರಿಕ ವಿಭಾಗದ ಅಧಿಕಾರಿಗಳು , ಪುತ್ತೂರು ಸಹಾಯಕ ಆಯುಕ್ತರಾದ ಗಿರಿನಂದನ್, ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಮ್ ,ಬೆಳ್ತಂಗಡಿ ಕಂದಾಯ ನಿರೀಕ್ಷಕ ಪ್ರತೀಶ್, ಕೊಕ್ಕಡ ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮಣಿ, ಸರ್ವೆ ಇಲಾಖೆಯ ಮಲ್ಲು , ಉಜಿರೆ ಗ್ರಾಮಲೆಕ್ಕಿಗಾ ಪ್ರದೀಪ್ ಕುಮಾರ್, ಧರ್ಮಸ್ಥಳ ಗ್ರಾಮ ಸಹಾಯಕ ಹರೀಶ್, ಲಾಯಿಲ ಗ್ರಾಮ ಲೆಕ್ಕಿಗರಾದ ರೆನಿತಾ, ಗ್ರಾಮ ಸಹಾಯಕ ಸತೀಶ್ , ತಹಶೀಲ್ದಾರ್ ಚಾಲಕ ಸಂತೋಷ್ ಕುಮಾರ್ ಜೊತೆಗಿದ್ದರು.

- Advertisement -
spot_img

Latest News

error: Content is protected !!