Friday, June 5, 2026
Homeತಾಜಾ ಸುದ್ದಿಪೆನ್ ಡ್ರೈವ್ ಪ್ರಕರಣ; ಪ್ರತ್ಯೇಕ ಸ್ಥಳದಲ್ಲಿ ನ್ಯಾಯಾಲಯ ವಿಚಾರಣೆ ನಡೆಸಲು ಪತ್ರ; ಎಚ್.ಕೆ.ಪಾಟೀಲ

ಪೆನ್ ಡ್ರೈವ್ ಪ್ರಕರಣ; ಪ್ರತ್ಯೇಕ ಸ್ಥಳದಲ್ಲಿ ನ್ಯಾಯಾಲಯ ವಿಚಾರಣೆ ನಡೆಸಲು ಪತ್ರ; ಎಚ್.ಕೆ.ಪಾಟೀಲ

- Advertisement -
- Advertisement -

ಗದಗ: ಹಾಸನ ಪೆನ್ ಡ್ರೈವ್ ಪ್ರಕರಣಗಳ ದೂರುದಾರರ, ನೊಂದ ಮಹಿಳೆಯರ, ಸಾಕ್ಷಿದಾರರ ಗೌಪ್ಯತೆ ಕಾಪಾಡುವುದು ಹಾಗೂ ರಕ್ಷಣೆ ನೀಡುವ ಸಲುವಾಗಿ ವಿಚಾರಣೆ ದಿನಗಳಂದು ಎಸ್ಐಟಿ ವಿಚಾರಣೆ ನಡೆಸುವ ನ್ಯಾಯಾಲಯಗಳನ್ನು ಗುರುನಾನಕ ಭವನಕ್ಕೆ ಸ್ಥಳಾಂತರಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಗೆ ಪತ್ರ ಬರೆಯಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಅವರು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎಸ್ಐಟಿಯು ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಕ್ಷ್ಮವಾಗಿ ತನಿಖೆ ಮಾಡುತ್ತಿದೆ. ಪೆನ್ ಡ್ರೈವ್ ಪ್ರಕರಣಗಳ ವಿಚಾರಣೆ ಸಲುವಾಗಿ ಪ್ರಕರಣಗಳ ವಿಚಾರಣೆ ದಿನಗಳಂದು ಮಾತ್ರ ಬೆಂಗಳೂರಿನ ಯುಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಗುರುನಾನಕ‌ ಭವನಕ್ಕೆ 42ನೇ ಎಸಿಎಂಎಂ ನ್ಯಾಯಾಲಯ, ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ, ಸಿವಿಲ್ ಕೋರ್ಟ್ ಆಂಡ್ ಸೆಷನ್ ಜಡ್ಜ್ ನ್ಯಾಯಾಲಯಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಪತ್ರ ಬರೆಯಲಾಗಿದೆ,’ ಎಂದರು.

- Advertisement -

Latest News

error: Content is protected !!