Wednesday, June 3, 2026
Homeಕರಾವಳಿಪುತ್ತೂರಿನ ಎಸ್ ಜಿ ಕಾರ್ಪೋರೇಟ್ಸ್ ಖರೀದಿಗೆ ಮುಖೇಶ್ ಅಂಬಾನಿ ಸರ್ಕಸ್ : ಕಂಪನಿ ಮಾರಾಟ ಮಾಡಲ್ಲ...

ಪುತ್ತೂರಿನ ಎಸ್ ಜಿ ಕಾರ್ಪೋರೇಟ್ಸ್ ಖರೀದಿಗೆ ಮುಖೇಶ್ ಅಂಬಾನಿ ಸರ್ಕಸ್ : ಕಂಪನಿ ಮಾರಾಟ ಮಾಡಲ್ಲ ಎಂದ ಸತ್ಯಶಂಕರ್ ಭಟ್

- Advertisement -
- Advertisement -

ಪುತ್ತೂರು; ತಂಪು ಪಾನೀಯಗಳ ಮೂಲಕ ಗಮನ ಸೆಳೆದಿರುವ ಪುತ್ತೂರಿನ ಎಸ್ ಜಿ ಕಾರ್ಪೋರೇಟ್ಸ್ ಮೇಲೆ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಕಣ್ಣು ಬಿದ್ದಿದೆ. ಬಹುಕೋಟಿ ಆಫರ್ ನೀಡಿ ಎಸ್ ಜಿ ಕಾರ್ಪೋರೇಟ್ಸ್ ಖರೀದಿಗೆ ಮುಖೇಶ್ ಅಂಬಾನಿ ಮುಂದಾಗಿದ್ದಾರೆ. ಆದರೆ ಎಸ್ ಜಿ ಕಾರ್ಪೋರೇಟ್ಸ್ ಆಡಳಿತ ನಿರ್ದೇಶಕ ಸತ್ಯ ಶಂಕರ್ ಅಂಬಾನಿಯ ಆಫರ್ ನ್ನು ತಿರಸ್ಕರಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ ಜಿ ಕಾರ್ಪೋರೇಟ್ಸ್ ಆಡಳಿತ ನಿರ್ದೇಶಕ ಸತ್ಯ ಶಂಕರ್,ಈ ಹಿಂದೆಯೂ ವಿಪ್ರೋ,ಕೋಕೋ ಕೋಲಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕಂಪನಿಗಳು ನಮ್ಮ ಕಂಪನಿ ಖರೀದಿಗೆ ಆಸಕ್ತಿ ತೋರಿಸಿದ್ದವು. ಈಗ ರಿಲಯನ್ಸ್ ಕಂಪೆನಿ ಕೂಡಾ ದೊಡ್ಡ ಆಫರ್ ನೀಡಿದೆ. ಉದ್ಯಮ ವಲಯದಲ್ಲಿ ಇದೆಲ್ಲಾ ಸಾಮಾನ್ಯವಾದ ವಿಷಯ. ಆದರೆ ನಾವು ಯಾವುದೇ ಕಾರಣಕ್ಕೂ ಕಂಪೆನಿ ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಪುತ್ತೂರು ಮೂಲದ ‘ಬಿಂದು’ ಎಸ್ ಜಿ ಕಂಪನಿಯ ಮೆಗಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದೇಶ ವಿದೇಶಗಳಲ್ಲೂ ಹೆಸರ ಮಾಡಿದೆ.  ಆಟೋ ಚಾಲಕರಾಗಿದ್ದ ಸತ್ಯಶಂಕರ್ ಭಟ್ ಪುತ್ತೂರಿನ ಕುಗ್ರಾಮದಲ್ಲಿ ಸ್ವಂತ ಉದ್ದಿಮೆ ಆರಂಭಿಸಿದ್ದರು.ಬಿಂದು ಕುಡಿಯುವ ನೀರು ಘಟಕ ಆರಂಭಿಸಿ ಯಶಸ್ವಿಯಾಗಿದ್ದಾರೆ. ಕುಗ್ರಾಮದಲ್ಲಿ ಬೆರಳೆಣಿಕೆಯ ಕಾರ್ಮಿಕರಿಂದ ಆರಂಭವಾದ ಬಿಂದು ಉದ್ಯಮ,ಇಂದು 500 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ಮಾಡುತ್ತಿದೆ.

- Advertisement -

Latest News

error: Content is protected !!