Thursday, June 4, 2026
Homeಕರಾವಳಿಮಂಗಳೂರು; ಅಪಘಾತಕ್ಕೆ ದೈಹಿಕ‌ ಶಿಕ್ಷಕ‌ ಬಲಿ

ಮಂಗಳೂರು; ಅಪಘಾತಕ್ಕೆ ದೈಹಿಕ‌ ಶಿಕ್ಷಕ‌ ಬಲಿ

- Advertisement -
- Advertisement -

ಮಂಗಳೂರು: ಬೈಕ್‌ ಅಪಘಾತಕ್ಕೆ ದೈಹಿಕ‌ ಶಿಕ್ಷಕ‌ ಬಲಿಯಾಗಿರುವ ಘಟನೆ ಮಂಗಳೂತಿನ ದೇರಳಕಟ್ಟೆ ಮಸೀದಿ ಬಳಿ ಶನಿವಾರ  ನಡೆದಿದೆ.

ದೇರಳಕಟ್ಟೆ ನಿವಾಸಿ ಇಸ್ಮಾಯಿಲ್‌ (55) ಮೃತ ದುರ್ದೈವಿ.  ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ  ತೆರಳಲು ರಸ್ತೆ ದಾಟುವ ಸಂದರ್ಭ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬುಲೆಟ್‌ ಬೈಕ್‌  ಇಸ್ಮಾಯಿಲ್‌ ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಇಸ್ಮಾಯಿಲ್‌ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಬೈಕ್‌ ಸವಾರರಿಬ್ಬರು ಗಾಯಗೊಂಡಿದ್ದಾರೆ. ಮೃತರು ಉತ್ತಮ ನಾಟಕ ಕಲಾವಿದ, ಖೋ ಖೋ ಪಂದ್ಯ ದಲ್ಲಿ ರಾಜ್ಯ ಮಟ್ಟದ ತೀರ್ಪುಗಾರರಾಗಿ, ಉಳ್ಳಾಲ ತಾಲೂಕು ವಾಲಿಬಾಲ್‌ ಅಸೋಸಿಯೇಷನ್‌ ಇದರ ಸಂಘಟನಾ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.ಮೃತರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!