Saturday, June 13, 2026
Homeಕರಾವಳಿಪುತ್ತೂರು: ಸಾರ್ವಜನಿಕ‌ ಬಸ್ ನಿಲ್ದಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಆರೋಪಿಗಳ ಬಂಧನ

ಪುತ್ತೂರು: ಸಾರ್ವಜನಿಕ‌ ಬಸ್ ನಿಲ್ದಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಆರೋಪಿಗಳ ಬಂಧನ

- Advertisement -
- Advertisement -

ಪುತ್ತೂರು; ಸಾರ್ವಜನಿಕ‌ ಬಸ್‌ ನಿಲ್ದಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ರೆಂಜದಲ್ಲಿ ನಡೆದಿದೆ.

ರೆಂಜದಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಕೆಲವರು ಕುಳಿತು ಮದ್ಯ ಸೇವನೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸಂಪ್ಯ ಪೊಲೀಸರು ಕಾರ್ಯಾಚರಣೆ ವೇಳೆ ಅಲ್ಲಿದ್ದ ವ್ಯಕ್ತಿಗಳು ಓಡಲು ಪ್ರಯತ್ನಿಸಿದ್ದ ವೇಳೆ ಪೊಲೀಸರು ಅವರನ್ನು ಹಿಡಿದಿದ್ದಾರೆ.

ಉಪ್ಪಳಿಗೆ ರಂಗಯ್ಯನಕಟ್ಟೆ ನಿವಾಸಿ ಸುನಿಲ್(22), ಆರ್ಯಾಪು ಮರಿಕೆ ನಿವಾಸಿ ಭಾಸ್ಕರ(22), ಬೆಟ್ಟಂಪಾಡಿ ಚೆಲಿಯಡ್ಕ ನಿವಾಸಿ ಪ್ರಶಾಂತ ಸಿ.ಹೆಚ್(26), ಇರ್ದೆ ನಿವಾಸಿ ಧನಂಜಯ(26), ಉಪ್ಪಳಿಗೆ ನಿವಾಸಿ ರಂಜಿತ್ (24)ರವರು ಬಂಧಿತ ಆರೋಪಿಗಳು. ಅವರಿಂದ ಮದ್ಯವನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!