Friday, June 5, 2026
Homeತಾಜಾ ಸುದ್ದಿಫೋಟೋ ತೆಗೆಯುವಾಗಲೇ ಕುಸಿದು ಬಿದ್ದು ಫೋಟೋಗ್ರಾಫರ್ ಸಾವು

ಫೋಟೋ ತೆಗೆಯುವಾಗಲೇ ಕುಸಿದು ಬಿದ್ದು ಫೋಟೋಗ್ರಾಫರ್ ಸಾವು

- Advertisement -
- Advertisement -

ಶಿವಮೊಗ್ಗ; ಫೋಟೋ ತೆಗೆಯುವಾಗಲೇ ಕುಸಿದು ಬಿದ್ದು ಫೋಟೋಗ್ರಾಫರ್ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೆಲಿನ ಸೋಮೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಸಾಗರ ಪಟ್ಟಣದ ರಾಮನಗರದ ಚಂದ್ರು (42) ಮೃತ ದುರ್ದೈವಿ. ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದ್ದಾರೆ.

 ಸಾಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!