Sunday, June 28, 2026
Homeಕರಾವಳಿಮಂಗಳೂರಿನಲ್ಲಿ 10 ಲಕ್ಷ ರೂಪಾಯಿ ಬಿದ್ದು ಸಿಕ್ಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ದುಡ್ಡು ನನ್ನದು ಎಂದು...

ಮಂಗಳೂರಿನಲ್ಲಿ 10 ಲಕ್ಷ ರೂಪಾಯಿ ಬಿದ್ದು ಸಿಕ್ಕ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ದುಡ್ಡು ನನ್ನದು ಎಂದು ಠಾಣೆಗೆ ಬಂದು ಹೇಳಿಕೆ ನೀಡಿದ ವ್ಯಕ್ತಿ

- Advertisement -
- Advertisement -

ಮಂಗಳೂರು: ಪಂಪ್‌ವೆಲ್‌ನಲ್ಲಿ 10 ಲಕ್ಷ ರೂಪಾಯಿಯ ನೋಟಿನ ಕಂತೆ ಸಿಕ್ಕಿ ಬಿದ್ದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದೀಗ ಪತ್ತೆಯಾಗಿದ್ದ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.

ಠಾಣೆಗೆ ಹಾಜರಾದ ವ್ಯಕ್ತಿ ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ.ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ಎನ್ನಲಾಗಿದೆ.

ನ.26ರಂದು ಕುಡುಕನೋರ್ವನ ಕೈಯಲ್ಲಿ ನೋಟಿನ ಬಾಕ್ಸ್ ಗಳು ಪತ್ತೆಯಾಗಿದ್ದವು.ಕುಡಿಕ‌ನ ಬಳಿ ಇದ್ದ 49,000 ರೂ.ಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದರು. ಮತ್ತೊಬ್ಬರು ಪೊಲೀಸರಿಗೆ 2.99 ಲಕ್ಷ ರೂ.ಗಳನ್ನು ತಂದು ಒಪ್ಪಿಸಿದ್ದರು.ಆದರೆ ಹಣದ ಮೂಲ ಪತ್ತೆಯಾಗಿರಲಿಲ್ಲ.ಬಂಡಲ್‌ಗಳಲ್ಲಿ ಒಟ್ಟು ಎಷ್ಟು ಹಣವಿತ್ತು ಎಂಬುದೂ ಗೊತ್ತಾಗಿರಲಿಲ್ಲ.

ಈ ಬಗ್ಗೆ ಕಮಿಷನರ್ ಪ್ರತಿಕ್ರಿಯಿಸಿ ಹಣದ ವಾರಸುದಾರರು ಇದ್ದರೆ ಸಂಪರ್ಕಿಸುವಂತೆ ಕೇಳಿದ್ದರು.ಸೂಕ್ತ ದಾಖಲೆ ಸಲ್ಲಿಸಿ ಹಣ ಪಡೆದುಕೊಳ್ಳುವಂತೆ ಹೇಳಿದ್ದರು. ಇದಲ್ಲದೆ ಬಾಕ್ಸ್ ನಲ್ಲಿ 10 ಲಕ್ಷ ಇತ್ತು ಎಂದು ಹೇಳಲಾಗಿತ್ತು.ಈ ಬಗ್ಗೆ ಎಷ್ಟು ಹಣ ಇತ್ತು ಎನ್ನುವ ಬಗ್ಗೆ ಸಂಶಯ ಕೂಡ ಮೂಡಿತ್ತು.

- Advertisement -

Latest News

error: Content is protected !!