Friday, April 26, 2024
Homeತಾಜಾ ಸುದ್ದಿಬಂಟ್ವಾಳ: ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಪಿಎಫ್‍ಐ ಟೆರರ್ ಟ್ರೈನಿಂಗ್! ಪ್ರವೀಣ್ ‌ನೆಟ್ಟಾರು‌ ಹತ್ಯೆಗೂ ಇಲ್ಲೇ ಸ್ಕೆಚ್:‌...

ಬಂಟ್ವಾಳ: ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಪಿಎಫ್‍ಐ ಟೆರರ್ ಟ್ರೈನಿಂಗ್! ಪ್ರವೀಣ್ ‌ನೆಟ್ಟಾರು‌ ಹತ್ಯೆಗೂ ಇಲ್ಲೇ ಸ್ಕೆಚ್:‌ ಸ್ಫೋಟಕ ಸತ್ಯ ಬಯಲು

spot_img
- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಟೆರರ್ ಆಕ್ಟಿವಿಟೀಸ್ ನಡೆಸುತ್ತಿತ್ತು. ಅದ್ರಲ್ಲೂ ಪಿಎಫ್ಐ ಟೆರರ್ ಆಕ್ಟಿವಿಟೀಸ್‌ಗೆ ಬಂಟ್ವಾಳದ ಸಭಾಂಗಣವೊಂದು ಪ್ರಮುಖ ಕೇಂದ್ರವಾಗಿತ್ತು ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. 

ಹೌದು ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ಇಂತಹದೊಂದು ಭಯಾನಕ ಚಟುವಟಿಕೆ ನಡೆಯುತ್ತಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ. ಟ್ರಸ್ಟ್ ಹೆಸರಿನಲ್ಲಿ ಇಲ್ಲಿ ಸಾಕಷ್ಟು ಯುವಕರಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.

ಪ್ರವೀಣ್ ‌ನೆಟ್ಟಾರು‌ ಹತ್ಯೆಗೂ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲೇ ಸ್ಕೆಚ್ ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ‌. ನೆಟ್ಟಾರು ಹತ್ಯೆಗೂ ಮುನ್ನ ಹಾಲ್‌ನಲ್ಲಿ ಸಭೆ ನಡೆದ ಬಗ್ಗೆ ಮಾಹಿತಿ ಸಿಕ್ಕಿದ್ದು, ಇದೇ ಕಾರಣಕ್ಕೆ ಸೆ.6ರಂದು ಫ್ರೀಡಂ ಕಮ್ಯೂನಿಟಿ ಹಾಲ್‌ಗೆ ದಾಳಿ ನಡೆಸಿದ್ದ ಎನ್.ಐ.ಎ, ಪಿಎಫ್‌ಐ ಸಭೆಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸಿತ್ತು. 

ಟ್ರಸ್ಟ್ ಹೆಸರಿನಲ್ಲಿ ಈ ಹಾಲ್ 2007 ರಲ್ಲಿ ಆರಂಭವಾಗಿದ್ದು, ಅಂದಿನಿಂದ ಈವರೆಗೂ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಪಡೆದಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (NIA) ದಿಂದ ಈ ಹಾಲ್ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಓರ್ವ ಟ್ರಸ್ಟಿ ಅಯೂಬ್ ಅಗ್ನಾಡಿಯನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಟ್ರಸ್ಟಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲ್ ನ್ನು ಸೀಜ್ ಮಾಡಲು ಎನ್‍ಐಎ ಸೂಚನೆ ನೀಡಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!