Sunday, June 7, 2026
Homeಕರಾವಳಿಉಡುಪಿಉಡುಪಿ ನಗರ ಪೊಲೀಸರ ಕಾರ್ಯಾಚರಣೆ; ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಬಚಾವ್

ಉಡುಪಿ ನಗರ ಪೊಲೀಸರ ಕಾರ್ಯಾಚರಣೆ; ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಬಚಾವ್

- Advertisement -
- Advertisement -

ಉಡುಪಿ: ಉಡುಪಿ ನಗರ ಠಾಣೆಯ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವನನ್ನು ಕಾಪಾಡಿದ ಘಟನೆ ನಡೆದಿದೆ.

ಉಡುಪಿ ನಗರದ ಖಾಸಗಿ ಲಾಡ್ಜ್ ನಲ್ಲಿ ಕೈ ಕೊಯ್ದುಕೊಂಡು ರೋಹನ್ ರಾಜೇಶ್ ಜತ್ತನ್ನ ಎಂಬ ವ್ಯಕ್ತಿ ಮಂಗಳೂರಿನ ಆದಿತ್ಯ ಎಂಬ ಸ್ನೇಹಿತನಿಗೆ ಕರೆ ಮಾಡಿದ್ದನು. ಮಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಆದಿತ್ಯ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಉಡುಪಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಗಿತ್ತು.

ಹೀಗಾಗಿ ಖಾಸಗಿ ಲಾಡ್ಜಿಗೆ ದೌಡಾಯಿಸಿದ ಪೊಲೀಸರು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿ ರೋಹನ್ ನನ್ನು ವೈದ್ಯರು ಬದುಕಿಸಿದ್ದಾರೆ.

ಉಡುಪಿ ನಗರಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ರೋಹನ್ ರಕ್ಷಣೆ ಮಾಡಲಾಗಿದ್ದು, ಕೌಟುಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ರೋಹನ್ ಕೈ ಕುಯ್ದುಕೊಂಡಿದ್ದನು ಎಂದು ಹೇಳಲಾಗಿದೆ.

- Advertisement -

Latest News

error: Content is protected !!