Friday, February 23, 2024
Homeತಾಜಾ ಸುದ್ದಿ187 ನಾಣ್ಯಗಳನ್ನು ನುಂಗಿದ್ದ ರಾಯಚೂರು ಜಿಲ್ಲೆಯ ವ್ಯಕ್ತಿ: ಶಸ್ತ್ರಚಿಕಿತ್ಸೆ ಮಾಡಿ ಕಾಯಿನ್ ಹೊರತೆಗೆದ ಬಾಗಲಕೋಟೆಯ ವೈದ್ಯರು

187 ನಾಣ್ಯಗಳನ್ನು ನುಂಗಿದ್ದ ರಾಯಚೂರು ಜಿಲ್ಲೆಯ ವ್ಯಕ್ತಿ: ಶಸ್ತ್ರಚಿಕಿತ್ಸೆ ಮಾಡಿ ಕಾಯಿನ್ ಹೊರತೆಗೆದ ಬಾಗಲಕೋಟೆಯ ವೈದ್ಯರು

- Advertisement -
- Advertisement -

ಬಾಗಲಕೋಟೆ: ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ಮೂಲಕ 187 ನಾಣ್ಯಗಳನ್ನು ಹೊರ ತೆಗೆಯಲಾಗಿದೆ.

ಬಾಗಲಕೋಟೆಯ ಹೆಚ್.ಎಸ್.ಕೆ. ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 187 ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ಹೊರ ತೆಗೆಯಲಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ನಿವಾಸಿಯಾಗಿರುವ 58 ವರ್ಷದ
ದ್ಯಾ‌ಮಪ್ಪ ಹರಿಜನ ಎಂಬ ವ್ಯಕ್ತಿ ನಾಣ್ಯಗಳನ್ನು ನುಂಗಿದ್ದು, ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರೂಪಾಯಿಯ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ದ್ಯಾಮಪ್ಪ ನುಂಗಿದ್ದು, ಎಕ್ಸ್ ರೇ ತೆಗೆದಿದ್ದ ವೇಳೆ ಹೊಟ್ಟೆಯಲ್ಲಿ ನಾಣ್ಯಗಳು ಪತ್ತೆಯಾಗಿದ್ದವು.

- Advertisement -
spot_img

Latest News

error: Content is protected !!