Thursday, June 4, 2026
Homeಕರಾವಳಿಕರಾವಳಿ ಹೊರತು ಪಡಿಸಿ ಕೊರಗಜ್ಜನ ದೈವಾರಾಧನೆ ಹಿನ್ನೆಲೆ; ಕುತ್ತಾರಿನ ಕೊರಗಜ್ಜನ ಆದಿ ಸ್ಥಳದಲ್ಲಿ ಸಂಘಟನೆಗಳಿಂದ ಪ್ರಾರ್ಥನೆ

ಕರಾವಳಿ ಹೊರತು ಪಡಿಸಿ ಕೊರಗಜ್ಜನ ದೈವಾರಾಧನೆ ಹಿನ್ನೆಲೆ; ಕುತ್ತಾರಿನ ಕೊರಗಜ್ಜನ ಆದಿ ಸ್ಥಳದಲ್ಲಿ ಸಂಘಟನೆಗಳಿಂದ ಪ್ರಾರ್ಥನೆ

- Advertisement -
- Advertisement -

ಮಂಗಳೂರು: ತುಳುನಾಡು ಹೊರತುಪಡಿಸಿದ ದೈವಾರಾಧನೆ ವಿರುದ್ಧ ಭಕ್ತರು ಕೊರಗಜ್ಜನ ಮೊರೆ ಹೋಗಿದ್ದಾರೆ‌.

ಮಂಗಳೂರು ಸಮೀಪದ ಕುತ್ತಾರು ಬಳಿ ಇರುವ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಸಂಘಟನೆಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ.

ತುಳುನಾಡು ದೈವಾರಾಧನಾ ಸಂರಕ್ಷಣಾ ಯುವ ವೇದಿಕೆ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಹಾಗೂ ದೈವಾರಾಧನಾ ಸಮಿತಿ ಬೆಳ್ತಂಗಡಿ ವತಿಯಿಂದ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಮೈಸೂರು, ಬೆಂಗಳೂರು ಭಾಗದಲ್ಲಿ ಕೊರಗಜ್ಜ ದೈವದ ಕೋಲ, ಸೇವೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಇದೇ ವೇಳೆ ಕೊರಗಜ್ಜನ ಹೆಸರಿನಲ್ಲಿ ಹಣ ವಸೂಲಿ ಮಾಡುವವರ ವಿರುದ್ದ ಕಾನೂನು ಹೋರಾಟಕ್ಕೆ ಕೂಡಾ ನಿರ್ಧಾರ ಕೈಗೊಳ್ಳಲಾಗಿದೆ.

- Advertisement -

Latest News

error: Content is protected !!