Wednesday, June 3, 2026
Homeಉತ್ತರ ಕನ್ನಡಫಾಲ್ಸ್ ನಲ್ಲಿ ಈಜಲು ಹೋಗಿ ಯುವಕ ಸಾವು

ಫಾಲ್ಸ್ ನಲ್ಲಿ ಈಜಲು ಹೋಗಿ ಯುವಕ ಸಾವು

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ವಜ್ರಾ ಪಾಲ್ಸ್‌ನಲ್ಲಿ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೆಳೆಯರೊಂದಿಗೆ ಫಾಲ್ಸ್ ನೋಡಲು ಬಂದ ಯುವಕ ಈಜಲು ಹೋಗಿ ಸಾವಿಗೀಡಾಗಿದ್ದಾನೆ.

ಶ್ರೀಹರಿ ರಾಮಕೃಷ್ಣ ಅಂಗಡಿ (21) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ರಾಯ್‌ಗಲ್ಲಿ ನಿವಾಸಿಯಾಗಿರುವ ಶ್ರೀಹರಿ ಗೆಳೆಯರೊಂದಿಗೆ ಫಾಲ್ಸ್ ನೋಡಲು ಬಂದಿದ್ದ ಎಂದು ಹೇಳಲಾಗಿದೆ.ಫಾಲ್ಸ್ ನಲ್ಲಿ ಈಜುವಾಗ ಕಲ್ಲಿನ ಮಧ್ಯೆ ಸಿಲುಕಿ ಹೊರ ಬರಲಾಗದೇ ಸಾವನಪ್ಪಿದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೋಯ್ಡಾ ತಾಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!