Thursday, June 4, 2026
Homeತಾಜಾ ಸುದ್ದಿಕೇಂದ್ರೀಯ ವಿವಿಗಳ ಪ್ರವೇಶ ಪರೀಕ್ಷೆಗೆ ಕನ್ನಡದಲ್ಲೂ ಅವಕಾಶ

ಕೇಂದ್ರೀಯ ವಿವಿಗಳ ಪ್ರವೇಶ ಪರೀಕ್ಷೆಗೆ ಕನ್ನಡದಲ್ಲೂ ಅವಕಾಶ

- Advertisement -
- Advertisement -

ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ ಕನ್ನಡದಲ್ಲೇ ಬರೆಯಬಹುದಾಗಿದೆ. ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.

2022-23ನೇ ಸಾಲಿಗೆ ಪದವಿ ಪ್ರವೇಶಕ್ಕೆ ಕಾಮನ್ ಯುನಿವರ್ಸಿಟಿ ಎಂಟ್ರೆನ್ಸ್ ಟೆಸ್ಟ್(ಸಿಯುಇಟಿ) ಕನ್ನಡ, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಉರ್ದು, ಅಸ್ಸಾಮಿ, ಬೆಂಗಾಲಿ, ಪಂಜಾಬಿ, ಒಡಿಯಾ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿದೆ.

ಸಿಯುಇಟಿ ಕುರಿತ ವಿಸ್ತೃತ ವಿವರ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ವೆಬ್ ಸೈಟ್ https://nta.ac.in/ ನಲ್ಲಿ ಲಭ್ಯವಿದ್ದು, ಅರ್ಜಿಗಳು ಏಪ್ರಿಲ್ ಮೊದಲ ವಾರದಿಂದ ಲಭ್ಯವಾಗಲಿವೆ.

- Advertisement -

Latest News

error: Content is protected !!