Monday, June 29, 2026
Homeಕರಾವಳಿಮಹಿಳೆಯೊಂದಿಗೆ ಅಸಭ್ಯ ವರ್ತನೆ: ರಿಕ್ಷಾ ಚಾಲಕನ ಸೆರೆ

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ರಿಕ್ಷಾ ಚಾಲಕನ ಸೆರೆ

- Advertisement -
- Advertisement -

ಮಂಗಳೂರು : ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ. ಇಲ್ಲಿನ ಮುನ್ನೂರು ಗ್ರಾಮದ ಸಮೀರ್ (22) ಬಂಧಿತ ಆರೋಪಿ.

ಮಹಿಳೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿ ಸಮೀರ್ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ನೊಂದ ಮಹಿಳೆ ಈ ವಿಚಾರವನ್ನು ತನ್ನ ಮಗನ ಬಳಿ ತಿಳಿಸಿದ್ದು, ಅದರಂತೆ ಆತ ರಿಕ್ಷಾ ಚಾಲಕನ ಬಳಿ ವಿಚಾರಿಸಿದಾಗ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಮೀರ್‌ನನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!