Saturday, June 6, 2026
Homeಅಪರಾಧಕಡಿರುದ್ಯಾವರ: ಕ್ಷುಲ್ಲಕ ಕಾರಣಕ್ಕಾಗಿ ತಂಡದಿಂದ ವ್ಯಕ್ತಿಗೆ ಹಲ್ಲೆ

ಕಡಿರುದ್ಯಾವರ: ಕ್ಷುಲ್ಲಕ ಕಾರಣಕ್ಕಾಗಿ ತಂಡದಿಂದ ವ್ಯಕ್ತಿಗೆ ಹಲ್ಲೆ

- Advertisement -
- Advertisement -

ಕಡಿರುದ್ಯಾವರ: ಯಾವುದೂ ಸಣ್ಣ ಕಾರಣಕ್ಕಾಗಿ ವಾದ ನಡೆದು ತಂಡವೊಂದು ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿ ಫೆ.2 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಗ್ರಾಮದ ಕೊಂಬರೋಡಿ ಮನೆಯ ಐತಪ್ಪ ನಳಿಕೆ ಯವರ ಪುತ್ರ ಬಾಬಿ ಎಂಬವರೇ ಹಲ್ಲೆಗೊಳಗಾದ  ವ್ಯಕ್ತಿ. ಬಾಬಿ ರವರು ಫೆ.27 ರಂದು ತಮ್ಮ ನೆರೆಮನೆಯಲ್ಲಿ ವಾಸವಿರುವ ಯುವತಿಯನ್ನು ಮನೆಯವರ ಒಪ್ಪಿಗೆಯ ಮೇರೆಗೆ ಸೋಮಂತಡ್ಕ ಆಕೋಟೆಕಟ್ಟೆ ಎಂಬಲ್ಲಿ ಬೂತಕೋಲ ಕಾರ್ಯಕ್ರಮಕ್ಕೆಂದು ತನ್ನ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ತನ್ನ ಪರಿಚಯಸ್ಥರಾದ ದಿನೇಶ್, ಅಮ್ಮು @ ಯಶೋದರ, ಸತೀಶ್ ಸೇರಿದಂತೆ 10-15 ಜನರ ತಂಡ ಮಠ ಎಂಬಲ್ಲಿ ಬೈಕನ್ನು ತಡೆದು ನಿಲ್ಲಿಸಿ ಅವ್ಯಾಚ್ಯ ಮಾತಿನಿಂದ ನಿಂದಿಸಿದ್ದಾರೆ.


ಅಲ್ಲದೆ ತನ್ನ ಮೇಲೆ ಹಲ್ಲೆ ನಡೆಸಿರುವ ಕಾರಣ ಗಂಭೀರ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -

Latest News

error: Content is protected !!