- Advertisement -
- Advertisement -
ಕುಂದಾಪುರ: ಕಡಲತೀರ ಸ್ವಚ್ಛತೆ ಅಭಿಯಾನದ ವೇಳೆ ಮೂಟೆಗಟ್ಟಲೆ ಪೆನ್ನುಗಳು ಸಿಕ್ಕಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದ ವೇಳೆ ಪೆನ್‌ಗಳ ರಾಶಿಯೇ ಸಿಕ್ಕಿವೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ಅಪ್‌ಲೋಡ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಇಂತಹ ತ್ಯಾಜ್ಯಗಳನ್ನು ಎಸೆಯುವ ಮುನ್ನ ಯೋಚಿಸಿ. ಇವು ಮೀನಿನ ಹೊಟ್ಟೆ ಸೇರಿ ಅನಾಹುತವಾಗಬಹುದು ಎಂದು ಕ್ಲೀನ್ ಕುಂದಾಪುರ ತಂಡದ ಮನವಿಯನ್ನೂ ಮಾಡಿದೆ.
- Advertisement -