Friday, June 5, 2026
Homeಕರಾವಳಿಕಡಬ: ಚಾರ್ಜ್ ಗೆ‌ ಇಟ್ಟ ಮೊಬೈಲ್ ತೆಗೆಯುವಾಗ ವಿದ್ಯುತ್ ಶಾಕ್: 9ನೇ ತರಗತಿ ಬಾಲಕ‌ ಸಾವು

ಕಡಬ: ಚಾರ್ಜ್ ಗೆ‌ ಇಟ್ಟ ಮೊಬೈಲ್ ತೆಗೆಯುವಾಗ ವಿದ್ಯುತ್ ಶಾಕ್: 9ನೇ ತರಗತಿ ಬಾಲಕ‌ ಸಾವು

- Advertisement -
- Advertisement -

ಕಡಬ: ಚಾರ್ಜ್ ಗೆ‌ ಇಟ್ಟ ಮೊಬೈಲ್ ತೆಗೆಯುವಾಗ ವಿದ್ಯುತ್ ಶಾಕ್ ತಗುಲಿ‌ 9ನೇ ತರಗತಿ ಬಾಲಕ‌ ಸಾವನ್ನಪ್ಪಿರುವ ಘಟನೆ ಗುಂಡ್ಯ ಗ್ರಾಮದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

ವಿದ್ಯುತ್ ಶಾಕ್ ಗೆ ಒಳಗಾಗಿ ಯುವಕನೋರ್ವ ಮೃತಪಟ್ಟ ಘಟನೆ  ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.26ರಂದು ಸಂಜೆ ನಡೆದಿದೆ.

ಗುಂಡ್ಯ ಗ್ರಾಮದ ಅಡ್ಡಹೊಳೆ ನಿವಾಸಿ ಮೊನೆಚ್ಚನ್‌ ಹಾಗೂ ವೀಣಾ ದಂಪತಿಗಳ ಪುತ್ರ ರೂಪೇಶ್‌ (15) ಮೃತ ಪಟ್ಟ ಬಾಲಕ . ಈತ ಸ್ಥಳೀಯ ಉದನೆ ಶಾಲೆಯಲ್ಲಿ 9 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು ಪ್ರಸ್ತುತ ಶಾಲೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.

ಈತ ಮಧ್ಯಾಹ್ನ ಮನೆಯಲ್ಲಿ ಚಾರ್ಜ್ ಗೆ ಇಟ್ಟ ಮೊಬೈಲ್ ತೆಗೆಯುತ್ತಿದ್ದಂತೆ ವಿದ್ಯುತ್ ಶಾಕ್ ಗೆ ಒಳಗಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ಯಿದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!