Thursday, July 16, 2026
Homeಕರಾವಳಿಕಡಬ: ಮಧ್ಯರಾತ್ರಿ‌‌ ಮನೆಗೆ ದಿಢೀರ್ ಎಂಟ್ರಿ ಕೊಟ್ಟ ಪೊಲೀಸರು: ಖಾಕಿಧಾರಿಗಳು‌ ಬಂದ ಕಾರಣ ಇನ್ನೂ ನಿಗೂಢ

ಕಡಬ: ಮಧ್ಯರಾತ್ರಿ‌‌ ಮನೆಗೆ ದಿಢೀರ್ ಎಂಟ್ರಿ ಕೊಟ್ಟ ಪೊಲೀಸರು: ಖಾಕಿಧಾರಿಗಳು‌ ಬಂದ ಕಾರಣ ಇನ್ನೂ ನಿಗೂಢ

- Advertisement -
- Advertisement -

ಕಡಬ: ಮಧ್ಯರಾತ್ರಿ ಪೊಲೀಸರು‌ ಮನೆಯೊಂದಕ್ಕೆ ಬಂದು ಮನೆ ಮಂದಿ ಗಲಿಬಿಲಿಗೊಂಡ ಘಟನೆ ಕಡಬದ ಕುಟ್ರುಪ್ಪಾಡಿ ಗ್ರಾಮದಲ್ಲಿ ನಡೆದಿದೆ.

ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ  ಬಜೆತ್ತಡ್ಕದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೆಯೊಂದಕ್ಕೆ   ಜುಲೈ 24 ರ ರಾತ್ರಿ 12:30 ಕ್ಕೆ ಬಂದ ಪೊಲೀಸರು  ಬಾಗಿಲು ಬಡಿದು ಮನೆ ಮಂದಿಯನ್ನು ಎಬ್ಬಿಸಿದ್ದಾರೆ.  ಬಳಿಕ ಮನೆಯೊಳಗೆ ನಿದ್ರಿಸಿದ್ದ ಓರ್ವನ ಕಾಲುಗಳನ್ನು ಟಾರ್ಚ್ ಹಾಕಿ‌ ನೋಡಿದ್ದಾರೆ.  ಬಳಿಕ  ಮನೆಯ ಇನ್ನೊಂದು ಬಾಗಿಲಿನಲ್ಲೂ ಹುಡುಕಾಟ ನಡೆಸಿದ್ದಾರೆ.

ಪೊಲೀಸರನ್ನು ಕಂಡು ಮನೆಮಂದಿ ಗಲಿಬಿಲಿಗೊಂಡಿದ್ದಾರೆ. ಪೊಲೀಸರ ಬಳಿ  ಬಂದಿರುವ ಕಾರಣ ಕೇಳಿದಾಗ ಉತ್ತರಿಸದೆ  ಹೋಗಿದ್ದಾರೆ ಎನ್ನಲಾಗಿದೆ. ಯಾರನ್ನಾದರೂ ಅಟ್ಟಿಸಿಕೊಂಡು ಬಂದರೆ? ಅಥವಾ ಯಾರಾದರೂ ಪೊಲೀಸರಿಗೆ ಕಣ್ಣು ತಪ್ಪಿಸಿದ್ದಾರಾ? ಎಂಬುವುದು ಪ್ರಶ್ನೆಯಾಹಿಯೇ‌ ಉಳಿದಿದೆ.

- Advertisement -

Latest News

error: Content is protected !!