Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಟಿಪ್ಪರ್ ಬಾಡಿಗೆ ಹಣ ಕೇಳಲು ಹೋದವನ ಕೊಲೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳನ್ನು...

ಬೆಳ್ತಂಗಡಿ : ಟಿಪ್ಪರ್ ಬಾಡಿಗೆ ಹಣ ಕೇಳಲು ಹೋದವನ ಕೊಲೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದ ಮಹಮ್ಮದ್ ತೌಸಿಫ್ ಮೇಲೆ ಸೋಡಾ ಬಾಟಲ್ ಬಿಸಾಕಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿಗಳಾದ ಬಿ.ರಹೀಂ ಮತ್ತು ಮಹಮದ್ ಫಯಾಜ್ ನನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್‌.ಆರ್.ಗಾಣಿಗೇರ ನೇತೃತ್ವದ ತಂಡ ಜೂ.29 ರಂದು ಬಂಧಿಸಿ ಸಂಜೆ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಾಧೀಶರು ಜು.11 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ವಿವರ: ಬೆಳ್ತಂಗಡಿಯಲ್ಲಿ ಆರು ತಿಂಗಳ ಹಿಂದೆ ಕೆಲಸ ಮಾಡಿದ್ದ ಟಿಪ್ಪರ್ ವಾಹನದ ಬಾಡಿಗೆಯ 65 ಸಾವಿರ ರೂಪಾಯಿ ಹಣ ಬಾಡಿಗೆಗೆ ಕಳುಹಿಸಿದ್ದ ಮಧ್ಯವರ್ತಿ ಚಿಬಿದ್ರೆ ಗ್ರಾಮದ ಕಕ್ಕಿಂಜೆ ನಿವಾಸಿ ಮಹಮ್ಮದ್ ತೌಸಿಫ್ ಗೆ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿ ಬಿ.ರಹೀಂ ನೀಡಲು ಬಾಕಿ ಇದ್ದು ಇದಕ್ಕಾಗಿ ಚಾರ್ಮಾಡಿ ಗ್ರಾಮದ ಬೀಟಿಗೆ ಜಂಕ್ಷನ್ ನಲ್ಲಿ ರಹೀಂ ಮತ್ತು ಮಹಮ್ಮದ್ ಫಯಾಜ್ ಇದ್ದ ಸ್ಥಳಕ್ಕೆ ಟಿಪ್ಪರ್ ಮಾಲಕ ಅರೀಫ್ ಜೊತೆ ಮಹಮ್ಮದ್ ತೌಸಿಫ್ ಜೂ.27 ರಂದು ಮಧ್ಯಾಹ್ನ ಸುಮಾರು 2:23 ಗಂಟೆಗೆ ಹೋಗಿ ಹಣ ಕೇಳಿದ್ದರು ಈ ನಡುವೆ ರಹೀಂ ಮತ್ತು ಮಹಮ್ಮದ್ ಫಯಾಜ್ ಸೇರಿ ತೌಸಿಫ್ ಗೆ ಬೆದರಿಕೆ ಹಾಕಿ ಹಲ್ಲೆ ಮಾಡಿ ಬಳಿಕ ಮಹಮದ್ ತೌಸಿಫ್ ಗೆ ಪಕ್ಕದಲ್ಲಿದ್ದ ಸೋಡಾ ಬಾಟಲ್ ತೆಗೆದುಕೊಂಡು ರಹೀಂ ಬಿಸಾಕಿದ್ದಾನೆ. ಇದರಿಂದ ಮಹಮ್ಮದ್ ತೌಸಿಫ್ ಕಣ್ಣಿಗೆ ಗಂಭೀರ ಗಾಯವಾಗಿದೆ‌. ಇದರಿಂದ ತಕ್ಷಣ ಸ್ಥಳೀಯರೆಲ್ಲ ಸೇರಿ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರಕರಣ: ಈ ಘಟನೆ ಬಗ್ಗೆ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರು ಮೇರೆಗೆ 109,118(2),115(2),351(2),352 r/w 3(5) BNS ಅಡಿಯಲ್ಲಿ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿಗಳಾದ ಬಿ.ರಹೀಂ ಮತ್ತು ಮಹಮ್ಮದ್ ಫಯಾಜ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ರಾತ್ರಿ ಪ್ರಕರಣ ದಾಖಲಾಗಿತ್ತು.

- Advertisement -

Latest News

error: Content is protected !!