ಬಂಟ್ವಾಳ: ಸಿದ್ದಕಟ್ಟೆ ಜಂಕ್ಷನ್ನಲ್ಲಿ ಭಾನುವಾರ ರಾತ್ರಿ ಯುವಕನೊಬ್ಬನ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.
ಬಂಟ್ವಾಳದ ಸಂಗಬೆಟ್ಟು ನಿವಾಸಿ ಗಣೇಶ್ (34) ನೀಡಿದ ದೂರಿನ ಪ್ರಕಾರ, ಅ. 18ರಂದು ರಾತ್ರಿ ಅವರು ತಮ್ಮ ಸಹೋದರ ಪ್ರಕಾಶ್ ಹಾಗೂ ಇತರ ಐವರು ಸ್ನೇಹಿತರೊಂದಿಗೆ ಸಿದ್ದಕಟ್ಟೆ ಜಂಕ್ಷನ್ನಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಕ್ಷಿತ್, ಕಿರಣ್ ಅಲಿಯಾಸ್ ರಂಜು, ಅಜೀತ್, ಧನುಷ್, ಸಂತೋಷ್ ಮತ್ತು ರಾಜು ಎಂಬವರು ತಮ್ಮ ದ್ವಿಚಕ್ರ ವಾಹನಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಪ್ರಕಾಶ್ ಅವರನ್ನು ಕರೆದಿದ್ದಾರೆ.
ಪ್ರಕಾಶ್ ಆರೋಪಿಗಳ ಬಳಿ ತೆರಳಿದಾಗ, ಎಲ್ಲರೂ ಸೇರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಕ್ಷಿತ್ ಎಂಬಾತ ಚೂರಿಯಿಂದ ಪ್ರಕಾಶ್ ಅವರಿಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಪ್ರಕಾಶ್ ಅವರನ್ನು ಗಣೇಶ್ ಹಾಗೂ ಇತರರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


