Monday, October 19, 2026
Homeಕರಾವಳಿತಲವಾರು, ಬಿಯರ್ ಬಾಟಲಿ ಹಿಡಿದು ಎರಡು ತಂಡಗಳ ಗಲಾಟೆ; ಇಬ್ಬರು ಪೊಲೀಸ್ ವಶಕ್ಕೆ

ತಲವಾರು, ಬಿಯರ್ ಬಾಟಲಿ ಹಿಡಿದು ಎರಡು ತಂಡಗಳ ಗಲಾಟೆ; ಇಬ್ಬರು ಪೊಲೀಸ್ ವಶಕ್ಕೆ

- Advertisement -
- Advertisement -

ಉಪ್ಪಿನಂಗಡಿ: ಇಲ್ಲಿನ ಕಾರ್ತಿಕ್ ಬಾರ್ ಎದುರು ಅ. 18ರ ರಾತ್ರಿ ತಲವಾರು ಹಾಗೂ ಬಿಯರ್ ಬಾಟಲಿ ಹಿಡಿದು ಎರಡು ತಂಡಗಳು ಗಲಾಟೆ ನಡೆಸಿದ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಳಂತಿಲದ ಮಂಜುನಾಥ ಹಾಗೂ ಕರ್ವೇಲ್‌ನ ವಿಶ್ವನಾಥ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ವೇಲ್‌ನ ಮುನ್ನ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮದ್ಯ ಸೇವಿಸಿದ್ದರೆನ್ನಲಾದ ತಂಡದ ಸದಸ್ಯರು ಬಾರ್‌ನ ಹೊರಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಗಲಾಟೆ ನಡೆಸಿ ಆತಂಕ ಸೃಷ್ಟಿಸಿದ್ದಾರೆ. ಈ ವೇಳೆ ಮಂಜುನಾಥ ತಲವಾರು ಝಳಪಿಸುತ್ತಿದ್ದರೆ, ಮುನ್ನ ಕೈಯಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ಎನ್ನಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಮಂಜುನಾಥನನ್ನು ವಶಕ್ಕೆ ಪಡೆದು ತಲವಾರನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರನ್ನು ಕಂಡ ಮುನ್ನ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!