Saturday, June 6, 2026
Homeಅಪರಾಧಮಂಗಳೂರು :ಜೀಪ್ ಡಿಕ್ಕಿಯಾಗಿ ಪಾದಚಾರಿ ಸಾವು!

ಮಂಗಳೂರು :ಜೀಪ್ ಡಿಕ್ಕಿಯಾಗಿ ಪಾದಚಾರಿ ಸಾವು!

- Advertisement -
- Advertisement -

ಮಂಗಳೂರು: ಮಂಗಳೂರಿನ ಬೈಕಂಪಾಡಿಯಲ್ಲಿ ಜೀಪು ಢಿಕ್ಕಿ ಹೊಡೆದು ನೆಲ್ಯಾಡಿಯ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.

ಗೋಳಿತೊಟ್ಟು ಶಾಂತಿನಗರ ನಿವಾಸಿ ರವೀಂದ್ರ ಆಚಾರಿ (40) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಶುಕ್ರವಾರದಂದು ರಾತ್ರಿ ವೇಳೆ ಬೈಕಂಪಾಡಿ ಸಮೀಪ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಜೀಪು ಡಿಕ್ಕಿ ಹೊಡೆದು, ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇವರು ಮಂಗಳೂರಿನಲ್ಲಿ ಲಾರಿಯೊಂದರಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು.

- Advertisement -

Latest News

error: Content is protected !!