Saturday, June 6, 2026
Homeಕರಾವಳಿಸುಳ್ಯ: ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ಸರಿಯಾದ ಪಾಠ ಕಲಿಸಿದ ಪಿ.ಡಿ.ಓ

ಸುಳ್ಯ: ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ಸರಿಯಾದ ಪಾಠ ಕಲಿಸಿದ ಪಿ.ಡಿ.ಓ

- Advertisement -
- Advertisement -

ಸುಳ್ಯ: ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ಸರಿಯಾದ ಪಿ.ಡ.ಓ ಪಾಠ ಕಲಿಸಿದ ಘಟನೆ ಐವರ್ನಾಡಿನಲ್ಲಿ‌ ನಡೆದಿದೆ.

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ  ಬಳ್ಪ ಗ್ರಾಮದ ಕುಂಜತ್ತಾಡಿ ನಿವಾಸಿಯೊಬ್ಬರು ತ್ಯಾಜ್ಯ ಎಸೆದಿದ್ದರು. ಈ. ಬಗ್ಗೆ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ರವರು ಮೇ.13 ರಂದು ಬೇಂಗಮಲೆ ಪರಿಸರಕ್ಕೆ ಭೇಟಿ ನೀಡಿ ಸಿ ಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದ್ದರು.

ಅಲ್ಲಿ ತ್ಯಾಜ್ಯ ಎಸೆದ ಬ್ಯಾಗ್ ಗಳನ್ನು ಪರಿಶೀಲಿಸಿ ತ್ಯಾಜ್ಯ ಬಿಸಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ರೂ 8000.00 ದಂಡ ವಿಧಿಸಿ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿಸಿದ್ದಾರೆ. ಗ್ರಾ.ಪಂ ಪಿಡಿಒ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ

- Advertisement -

Latest News

error: Content is protected !!