Wednesday, June 3, 2026
Homeಕರಾವಳಿಬೆಳ್ತಂಗಡಿ : ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ; ಹೆಬ್ಬಾವನ್ನು ರಕ್ಷಣೆ ಮಾಡಿದ ಸ್ನೇಕ್ ಅಶೋಕ್

ಬೆಳ್ತಂಗಡಿ : ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ; ಹೆಬ್ಬಾವನ್ನು ರಕ್ಷಣೆ ಮಾಡಿದ ಸ್ನೇಕ್ ಅಶೋಕ್

- Advertisement -
- Advertisement -

ಬೆಳ್ತಂಗಡಿ : ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ಹಿಡಿದಿದ್ದು‌. ಈ ವೇಳೆ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರನ್ನು ಕರೆಸಿ ಎರಡು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ‌.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕಲ್ಲಾಜೆ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ ಕೆ.ಬಾಲಕೃಷ್ಣ ಗೌಡ ಎಂಬವರ ಮನೆಯ ಅಂಗಳದಲ್ಲಿ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಸುಮಾರು 16 ಅಡಿ ಉದ್ದದ ಕಾಳಿಂಗ ಸರ್ಪ ಬೇಟೆಯಾಡುತ್ತಿರುವಾಗ ಮನೆಯವರು ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರನ್ನು ಸ್ಥಳಕ್ಕೆ ಕರೆಸಿ ಕಾಳಿಂಗ ಸರ್ಪದ ಹಿಡಿತದಲ್ಲಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.

ಹೆಬ್ಬಾವಿಗೆ ಸಣ್ಣಪುಟ್ಟ ಗಾಯವಾಗಿದ್ದು‌. ಅಪಾಯದಿಂದ ಪಾರಾಗಿದೆ.ಕಾಳಿಂಗ ಸರ್ಪ ಮತ್ತು ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ ಸ್ನೇಕ್ ಅಶೋಕ್ ಲಾಯಿಲ.

- Advertisement -

Latest News

error: Content is protected !!