Tuesday, May 14, 2024
Homeಅಪರಾಧಕಾನೂನು ರಕ್ಷಣೆ ಮಾಡುವ ಅಧಿಕಾರಿಯಿಂದಲೇ ಕಾನೂನು ಉಲ್ಲಂಘನೆ; ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ ಪಿಎಸ್​ಐ!..

ಕಾನೂನು ರಕ್ಷಣೆ ಮಾಡುವ ಅಧಿಕಾರಿಯಿಂದಲೇ ಕಾನೂನು ಉಲ್ಲಂಘನೆ; ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ ಪಿಎಸ್​ಐ!..

spot_img
- Advertisement -
- Advertisement -

ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ ಐ ಧನರಾಜ್ ಮಫ್ತಿಯಲ್ಲಿದ್ದರೂ ಸೊಂಟಕ್ಕೆ ಪೊಲೀಸ್‌ ವಾಕಿಟಾಕಿ ಹಾಕಿಕ್ಕೊಂಡು ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿ ಕಾನೂನು ಉಲ್ಲಂಘನೆ ಮಾಡಿದ್ದು ಕಂಡುಬಂದಿದೆ. ಈ ಕುರಿತು ಸಾರ್ವಜನಿಕರು ಕಿಡಿಕಾರಿದ್ದಾರೆ.

ದ್ವಿಚಕ್ರ ವಾಹನ ಚಲಾಯಿಸುವ ಸಾಮಾನ್ಯ ಜನರು ಹೆಲ್ಮೆಟ್ ಧರಿಸದೆ ಇದ್ದಾಗ, ಕಾನೂನು ಉಲ್ಲಂಘನೆ ಎನ್ನುವಂತೆ ದಂಡ ವಿಧಿಸುವ ಪೊಲೀಸ್ ಅಧಿಕಾರಿ ಪಿಎಸ್ ಐ ಧನರಾಜ್ ಮಫ್ತಿಯಲ್ಲಿ ಸೋಮವಾರ ಮಧ್ಯಾಹ್ನದಂದು 3 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟಿನ ಕಡೆಗೆ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಸೊಂಟದಲ್ಲಿ ವಾಕಿ ಟಾಕಿ ಇದ್ದುದನ್ನ ಕಂಡ ಇತರೇ ವಾಹನ ಸವಾರರು ಈತ ಪೊಲೀಸ್ ಎಂದು ಖಾತರಿ ಪಡಿಸಿ ಫೋಟೊ ಕ್ಲಿಕ್ಕಿಸಿದ್ದಾರೆ.

ಈ ಕುರಿತು ಸಾರ್ವಜನಿಕರು ಕಿಡಿಕಾರಿದ್ದು, ಅಧಿಕಾರಿಯು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರುವಾಗ ಸಂಚಾರಿ ಕಾನೂನು ಉಲ್ಲಂಘಿಸುವ ವಾಹನ ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸುತ್ತಾರೆ. ಆದರೆ ಕಾನೂನು ರಕ್ಷಣೆ ಮಾಡುವ ಅದೇ ಪಿಎಸ್ ಐ ಈ ರೀತಿ ಹೆದ್ದಾರಿಯಲ್ಲಿ ಕಾನೂನನ್ನು ಗಾಳಿಗೆ ತೂರಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇನ್ನು ಪಿಎಸ್ ಐ ಧನರಾಜ್ ಅವರ ತಲೆಗೆ ಸಣ್ಣ ಗಾಯವಾಗಿ ಪ್ಲಾಸ್ಟರ್ ಹಾಕಲಾಗಿದ್ದು, ಅವರು ಅದನ್ನೇ ನೆಪವಾಗಿಸಿ ಕಳೆದ ಕೆಲವು ದಿನಗಳಿಂದ ಹೆಲೆಟ್ ರಹಿತ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದಾರೆ, ಈ ಬಗ್ಗೆ ಠಾಣಾ ಅಧಿಕಾರಿಗಳು ಬುದ್ಧಿ ಹೇಳಿದರು ಕೇಳುತ್ತಿಲ್ಲ ಎಂದು ಉಳ್ಳಾಲ ಠಾಣೆಯ ಸಿಬ್ಬಂದಿಗಳು ಸುದ್ದಿಯಲ್ಲಿ ತಿಳಿಸಿದ್ದಾರೆ

- Advertisement -
spot_img

Latest News

error: Content is protected !!