Friday, June 5, 2026
HomeUncategorizedಬೆಳಗಿನ ಜಾವ ಕಾಡಿದ ಜವರಾಯ- ಮಲಗಿದ್ದ 18 ಕ್ಕೂ ಹೆಚ್ಚು ಮಂದಿಯ ಮೇಲೆ ಟ್ರಕ್ ಹರಿದು...

ಬೆಳಗಿನ ಜಾವ ಕಾಡಿದ ಜವರಾಯ- ಮಲಗಿದ್ದ 18 ಕ್ಕೂ ಹೆಚ್ಚು ಮಂದಿಯ ಮೇಲೆ ಟ್ರಕ್ ಹರಿದು 13 ಸಾವು!..

- Advertisement -
- Advertisement -

ಸೂರತ್ : ಇಲ್ಲಿನ ಕಿಮ್ ಚಾರ್ ರಸ್ತಾ ಎಂಬಲ್ಲಿ ಪಾದಚಾರಿ ಮಾರ್ಗದಲ್ಲಿ 18 ಕ್ಕೂ ಹೆಚ್ಚು ಮಂದಿ ಮಲಗಿದ್ದು ಬೆಳಗಿನ ಜಾವ ಟ್ರಕ್ ವೊಂದು ಹರಿದಾಡಿದೆ. ಈ ಅಪಘಾತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಮೃತರನ್ನು ರಾಜಸ್ಥಾನದ ಬನ್ಸ್ ವಾರಾ ಜಿಲ್ಲೆಯ ದಿನಗೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಾಲು ದಾರಿಯಲ್ಲಿ ಮಲಗಿದ್ದಾಗ ಕಬ್ಬು ತುಂಬಿದ ಟ್ರ್ಯಾಕ್ಟರ್ ಮತ್ತೊಂದು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯೇ ಫುಟ್ ಪಾತ್ ಗೆ ಹೋಗಿ, ಅಲ್ಲಿ ಮಲಗಿದ್ದ 18 ಕ್ಕೂ ಹೆಚ್ಚು ಜನರ ಮೇಲೆ ಟ್ರಕ್ ಹರಿಸಿದ್ದಾನೆ.

- Advertisement -

Latest News

error: Content is protected !!