Saturday, June 13, 2026
Homeಕರಾವಳಿಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್: ಬೃಹತ್ ರಕ್ತದಾನ ಶಿಬಿರ

ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್: ಬೃಹತ್ ರಕ್ತದಾನ ಶಿಬಿರ

- Advertisement -
- Advertisement -

ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ಕಾಲೇಜಿನ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಇಲ್ಲಿನ ಎನ್ಎಸ್ಎಸ್ ,ಎನ್ ಸಿ ಸಿ,ಯೂತ್ ರೆಡ್ ಕ್ರಾಸ್, ರೋವರ್ಸ್ ರೇಂಜರ್ಸ್,ರೆಡ್ ರಿಬನ್ ಕ್ಲಬ್ ಹಾಗೂ ರೋಟರಿ ಕ್ಲಬ್ ಮಡಂತ್ಯಾರ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಮಂಗಳೂರು ಇದರ ವತಿಯಿಂದ ಈ ಶಿಬಿರ ನಡೆಯಿತು.

ಸೇಕ್ರೆಡ್ ಹಾರ್ಟ್ ವಿಧ್ಯಾ ಸಂಸ್ಥೆಯ ಸಂಚಾಲಕರಾದ ರೆ.ಫಾ ಬೇಸಿಲ್ ವಾಸ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಇವರು ಗಿಡಕ್ಕೆ ನೀರುಣಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ರಕ್ತದಾನ ಮಾಡುವುದರಿದ ಒಂದು ಜೀವಕ್ಕೆ ಉಡುಗೊರೆ ನೀಡಬಹುದು ಎಂಬುದನ್ನು ತಿಳಿಸಿದರು.

ಮುಖ್ಯ ಅತಿಥಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಪ್ರವೀಣ್ ಮಡಂತ್ಯಾರ್ ಇವರು ರೆಡ್ ಕ್ರಾಸ್ ಸೊಸೈಟಿ ರಕ್ತದಾನ ಶಿಬಿರ ಏರ್ಪಡಿಸಿದರೆ ಅಗತ್ಯವುಳ್ಳವರಿಗೆ ಉಚಿತವಾಗಿ ರಕ್ತವನ್ನು ಒದಗಿಸುಲು ಆಗುತ್ತದೆ ಎಂದು ಹೇಳಿದರು.

ಕೋವಿಡ್ 19 ಇದರ ವಿಷಮ ಪರಿಸ್ಥಿತಿಯಲ್ಲಿ ಅನೇಕ ಕಾಯಿಲೆ ಯಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತ ಒದಗಿಸುವುದು ಕಷ್ಟಾವಾಗುತ್ತಿದೆ.ಇಂತಹ ಸಮಯದಲ್ಲಿ ರೋಗಿಗಳಿಗೆ ರಕ್ತ ಒದಗಿಸಲು ಶಿಬಿರದಲ್ಲಿ ಆರೋಗ್ಯವಂತ ವ್ಯಕ್ತಿಗಳಿಂದ ರಕ್ತ ಸಂಗ್ರಹಿಸಲಾಯಿತು. ಹಾಗೂ ದಾಖಲೆಯ 153 ಯೂನಿಟ್ ರಕ್ತ ಸಂಗ್ರಹವಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಕಾಂತಪ್ಪ ಗೌಡ,ಕಾರ್ಯದರ್ಶಿ ಮ್ಯಾಕ್ಸಿಮ್ ಅಲ್ಬುಕರ್ಕ್ ಹಾಗೂ ಕಾಲೇಜಿನ ಸಂಘ ಸಂಸ್ಥೆಗಳ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು ಮತ್ತು ವಿದ್ಯಾರ್ಥಿ ಶಾಹಿದ್ ಆಫ್ರಿದ್ ವಂದಿಸಿದರು

- Advertisement -

Latest News

error: Content is protected !!