Thursday, June 4, 2026
Homeಕರಾವಳಿಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ದೀಪಾವಳಿ ಸಂದರ್ಭ ಸುಡುಮದ್ದು ಸಿಡಿದು ಗಾಯಗೊಂಡ ದೀಪಕ್ ಇವರಿಗೆ ವೈದ್ಯಕೀಯ...

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ ದೀಪಾವಳಿ ಸಂದರ್ಭ ಸುಡುಮದ್ದು ಸಿಡಿದು ಗಾಯಗೊಂಡ ದೀಪಕ್ ಇವರಿಗೆ ವೈದ್ಯಕೀಯ ನೆರವು

- Advertisement -
- Advertisement -

ಬೆಳ್ತಂಗಡಿ: ದೀಪಾವಳಿ ಸಂದರ್ಭದಲ್ಲಿ ಮಲವಂತಿಗೆ ಗ್ರಾಮದ ನಾರಾಯಣ ಗೌಡರ ಪುತ್ರ ದೀಪಕ್ ಎಂಬವರಿಗೆ ಸುಡು ಮದ್ದು ಕೈಯಲ್ಲಿ ಸಿಡಿದು ಕೈ ಗಾಯ ಗೊಂಡು, ಬೆನಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ.

ತೀರಾ ಬಡತನದ ಕುಟುಂಬ ಇವರದ್ದು. ಇವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಬಿರುವೆರ್ ಕುಡ್ಲ ಸಂಘಟನೆಯ ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ತುರ್ತು ಸೇವಾ ನಿಧಿಯಿಂದ ನೀಡುವ ಮೂಲಕ ಈ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ದಾನಿಗಳ ನೆರವಿನಿಂದ ಸಂಗ್ರಹಿಸಿದ ಧನ ಸಹಾಯ ಮೊತ್ತವನ್ನು ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಗೋಪಾಲ ಕೃಷ್ಣ ಭಟ್ ರವರ ಮೂಲಕ ಇಂದು ವಿತರಿಸಲಾಯಿತು.

- Advertisement -

Latest News

error: Content is protected !!