Friday, June 26, 2026
HomeUncategorizedವಿಪಕ್ಷ ನಾಯಕ ಆರ್. ಅಶೋಕ್ ದ.ಕ‌. ಮತ್ತು ಉಡುಪಿ ಪ್ರವಾಸ ರದ್ದು

ವಿಪಕ್ಷ ನಾಯಕ ಆರ್. ಅಶೋಕ್ ದ.ಕ‌. ಮತ್ತು ಉಡುಪಿ ಪ್ರವಾಸ ರದ್ದು

- Advertisement -
- Advertisement -

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ರದ್ದುಗೊಂಡಿದೆ.

ವಕ್ಫ್ ಕಾಯ್ದೆ ವಿಚಾರವಾಗಿ ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶೋಕ್ ಪ್ರವಾಸ ನಿಗದಿಯಾಗಿತ್ತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಬೇಕಿತ್ತು.

ಅಲ್ಲದೇ ಉಡುಪಿ ಮತ್ತು ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಕಚೇರಿಗಳಲ್ಲಿ ವಿಪಕ್ಷ ನಾಯಕರ ಸುದ್ದಿಗೋಷ್ಠಿಗಳನ್ನೂ ನಿಗದಿಪಡಿಸಲಾಗಿತ್ತು.ಆದರೆ ಇಂದಿನ ಎರಡೂ ಜಿಲ್ಲೆಗಳ ಪ್ರವಾಸವನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ ಎಂದು ವಿಪಕ್ಷ ನಾಯಕರ ಕಚೇರಿ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ವಕ್ಪ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ರಚಿಸಲ್ಪಟ್ಟಿದ್ದ ಮೂರು ತಂಡಗಳ ಪ್ರವಾಸದ ಅಂಗವಾಗಿ ಅಶೋಕ್ ನೇತೃತ್ವದ ತಂಡದ ಪ್ರವಾಸ ನಿಗದಿಯಾಗಿತ್ತು.

- Advertisement -

Latest News

error: Content is protected !!