Sunday, February 16, 2025
HomeUncategorizedಉಡುಪಿ :  ಬಿಯರ್ ಬಾಟಲಿಯಿಂದ ಕುತ್ತಿಗೆ ಕೊಯ್ದು ಹೋಟೆಲ್ ನೌಕರನ ಹತ್ಯೆ

ಉಡುಪಿ :  ಬಿಯರ್ ಬಾಟಲಿಯಿಂದ ಕುತ್ತಿಗೆ ಕೊಯ್ದು ಹೋಟೆಲ್ ನೌಕರನ ಹತ್ಯೆ

spot_img
- Advertisement -
- Advertisement -

ಊಡುಪಿ :  ಬಿಯರ್ ಬಾಟಲಿಯಿಂದ ಕುತ್ತಿಗೆ ಕೊಯ್ದು ಹೋಟೆಲ್ ನೌಕರನನ್ನು ಹತ್ಯೆ ಮಾಡಿರುವ ಘಟನೆ ಮಣಿಪಾಲದ ಈಶ್ವರನಗರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಹೊನ್ನಾವರ ಕಾಸರಗೋಡಿನ ಶ್ರೀಧರ್ ನಾಯಕ(35)  ಮೃತ  ಯುವಕ.  ಶ್ರೀಧರ್ ಅವರು ಮಣಿಪಾಲದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು  ಇವತ್ತು ಬೆಳಿಗ್ಗೆ ದುಷ್ಕರ್ಮಿಗಳು ಕುತ್ತಿಗೆಯನ್ನು ಬಿಯರ್ ಬಾಟಲಿಯಿಂದ ಕೊಯ್ದು ಹತ್ಯೆ ಮಾಡಿದ್ದಾರೆ.  ಕೊಲೆಗೆ ಕಾರಣ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್, ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರರಿಂದ ನಾಲ್ಕು ಜನರಿದ್ದ ತಂಡ ಬೆಳಿಗ್ಗೆ ಆರರ ಸುಮಾರಿಗೆ ಹೊಡೆದಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ಯಾವುದೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರೀಧರ್ ಅವರನ್ನು ತಂಡ ಬಿಯರ್ ಬಾಟಲಿಯಲ್ಲಿ ಹೊಡೆದು ಹತ್ಯೆಗೈದಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!