- Advertisement -
- Advertisement -
ಮಂಗಳೂರು: ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಹರೇಕಳದಲ್ಲಿ ನಡೆದಿದೆ. ಹರೇಕಳ ಗ್ರಾಪಂ ಬಳಿಯ ನಿವಾಸಿ ಅಬ್ದುಲ್ ಕಲಾಂ ಎಂಬವರ ಪುತ್ರ ಮುಹಮ್ಮದ್ ಶಯಾನ್ (8) ಗಾಯಗೊಂಡ ಬಾಲಕ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಯಾನ್ ಹರೇಕಳ ಪಾವೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ, ಬುಧವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬಂದಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯ ದೃಶ್ಯಾವಳಿ ಗ್ರಾಪಂನ ಸಿಸಿ ಕ್ಯಾ ಮೆರಾದಲ್ಲಿ ಸೆರೆಯಾಗಿದ್ದು ಅದರ ಆಧಾರದಲ್ಲಿ ಕಾರನ್ನು ಮಂಗಳೂ ರಿನ ಬಿಕರ್ನಕಟ್ಟೆ ಮನೆಯಲ್ಲಿ ಪತ್ತೆ ಹಚ್ಚಲಾಗಿದ್ದು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -