ಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆಯು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಅಕ್ರಮ ಆಸ್ತಿಗಳ ವಿವರದ ಸಂಖ್ಯೆಯು ಕೂಡ ಎರುತ್ತಿದೆ.
ಈ ಹಿಂದೆ ಮುಡಾ ಹಗರಣದಲ್ಲಿ 1,095 ಸೈಟ್‌ಗಳನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನುತ್ತಿದ್ದು, ಇದೀಗ ಬರೋಬ್ಬರಿ 4,921 ಸೈಟ್‌ಗಳೇ ಅಕ್ರಮ ಎನ್ನೋದು ಬಯಲಾಗಿದೆ. ಈ ಅವ್ಯವಹಾರಕ್ಕೆ ಮುಡಾದ ಇಬ್ಬರು ಮಾಜಿ ಆಯುಕ್ತರು ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆಗೆ ಸೇರಿ ಅಕ್ರಮ ಲೇಔಟ್‌ಗಳ ನಿರ್ಮಾಣ ನಡೆದಿದೆ ಎಂದು ತನಿಖೆಯ ವೇಳೆಯಲ್ಲಿ ತಿಳಿದು ಬಂದಿದೆ.
ಇನ್ನು ಬಹು ಮುಖ್ಯವಾದ ವಿಚಾರದ ಕುರಿತು ಇಡಿ ತನಿಖೆಯಲ್ಲಿ ಮಾಹಿತಿ ಲಭಿಸಿದ್ದು, 50:50 ಅನುಪಾತ ಅಷ್ಟೇ ಅಲ್ಲ, 60:40 ಅನುಪಾತದಲ್ಲಿ ಲೇಔಟ್‌ಗೆ ಲೇಔಟ್‌ಗಳನ್ನೇ ಅಕ್ರಮ ಮಾಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ತಿದ್ದಿದ್ದಾರೆ ಎನ್ನಲಾಗಿದೆ.
ಇನ್ನು ಮುಡಾ ಹಗರಣವು ಭಾರೀಯ 700 ಕೋಟಿಯ ಅಕ್ರಮವಲ್ಲ, ಇದು 2,800 ಕೋಟಿಯ ಅಕ್ರಮ ವ್ಯವಹಾರವಾಗಿದ್ದು, 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಕ್ರಮದ ಸರಮಾಲೆ ನಡೆದಿದೆ ಎನ್ನಲಾಗಿದೆ.