ಲಕ್ನೋ: ಇಸ್ಲಾಮಿಕ್ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಿಜ್ವಿ ಬರೇಲ್ವಿ, ಮುಸ್ಲಿಮರು ಗೋಮಾಂಸವನ್ನು ತಿನ್ನಬಾರದು ಎಂದು ಅಸ್ಸಾಂನ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಈ ಹಿಂದೆ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ, ಅಸ್ಸಾಂನ ಮುಸ್ಲಿಂ ಸಮುದಾಯಕ್ಕೆ ಹೋಟೆಲ್ ಮತ್ತು ಕಾರ್ಯಕ್ರಮದ ಸ್ಥಳಗಳಲ್ಲಿ ಗೋಮಾಂಸವನ್ನು ನಿಷೇಧಿಸಿದೆ ಎಂದು ಆದೇಶವನ್ನು ಹೊರಡಿಸಿತ್ತು.
ಇದೀಗ ಇದರ ಬೆನ್ನಲ್ಲೇ ಮುಸ್ಲಿಂ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಿಜ್ವಿ ಬರೇಲ್ವಿ, ‘ರಾಜ್ಯ ಸರ್ಕಾರದ ಆದೇಶಕ್ಕೆ ಹಿಂದೇಟು ಕೊಡುವಂತೆ ಮುಸ್ಲಿಮರು ಗೋಮಾಂಸವಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ನಂಬಿರುವಂತಿದೆ. ಅಸ್ಸಾಂನಲ್ಲಿರುವ ಮುಸ್ಲಿಮರು ಗೋಮಾಂಸ ತಿನ್ನದೆ ಬದುಕುವಂತೆ ನಾನು ಕರೆ ನೀಡುತ್ತೇನೆ. ಜೀವನ ಮತ್ತು ಸಾವು ದೇವರ ಕೈಯಲ್ಲಿದೆ. ಮುಂದಿನ ದಿನಗಳಿಂದ ಅಸ್ಸಾಂ ರಾಜ್ಯದ ಮುಸ್ಲಿಮರು ಗೋಮಾಂಸ ಸೇವನೆ ನಿಲ್ಲಿಸಬೇಕು. ಗೋಮಾಂಸ ಸೇವನೆ ಮುಸ್ಲಿಂ ಸಮುದಾಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಇಸ್ಲಾಂ ಧರ್ಮವು ಗೋಮಾಂಸ ಸೇವನೆಯನ್ನು ಕಡ್ಡಾಯ ಮಾಡುವುದಿಲ್ಲ. ಜನರು ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ ಎಂದು ಧರ್ಮಗುರು ಸ್ಪಷ್ಟಪಡಿಸಿದ್ದಾರೆ,’ ಎನ್ನಲಾಗಿದ