Wednesday, June 3, 2026
Homeಚಿಕ್ಕಮಗಳೂರುಜುಲೈ 22ರವರೆಗೆ ಚಿಕ್ಕಮಗಳೂರಿಗೆ ಪ್ರವಾಸಿಗರು ಬರದಂತೆ ಜಿಲ್ಲಾಡಳಿತ ಸೂಚನೆ; ಮುಳ್ಳಯ್ಯನಗಿರಿಗೆ ಪ್ರವೇಶ ನಿಷೇಧ ಮಾಡಿ ಡಿಸಿ...

ಜುಲೈ 22ರವರೆಗೆ ಚಿಕ್ಕಮಗಳೂರಿಗೆ ಪ್ರವಾಸಿಗರು ಬರದಂತೆ ಜಿಲ್ಲಾಡಳಿತ ಸೂಚನೆ; ಮುಳ್ಳಯ್ಯನಗಿರಿಗೆ ಪ್ರವೇಶ ನಿಷೇಧ ಮಾಡಿ ಡಿಸಿ ಆದೇಶ

- Advertisement -
- Advertisement -

ಚಿಕ್ಕಮಗಳೂರು ಜಿಲ್ಲಾದ್ಯಂತ ಭಾರೀ ಮಳೆ ಹಿನ್ನೆಲೆ ಕಾಫಿನಾಡಿಗೆ ಆಗಮಿಸದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ತಾತ್ಕಾಲಿಕವಾಗಿ ಪ್ರವಾಸ ಮುಂದೂಡುವಂತೆ ಸೂಚನೆ ನೀಡಿದೆ. ಒಂದು ವಾರದವರೆಗೂ ಜಿಲ್ಲೆಗೆ ಬಾರದಂತೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ-ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಅಲ್ಲದೇಬಹುತೇಕ  ಹಳ್ಳ-ಕೊಳ್ಳಗಳು, ಕೆರೆಗಳು ಕೂಡ ಭರ್ತಿಯಾಗಿವೆ.ಹಲವೆಡೆ ಭೂ ಕುಸಿತ, ಗುಡ್ಡ ಕುಸಿತ ಪ್ರಕರಣಗಳು ಕಂಡು ಬರುತ್ತಿಲವೆ. ಹಾಗಾಗಿ ಹೋಂ ಸ್ಟೇ, ರೆಸಾರ್ಟ್, ವತಿಯಿಂದ ಟ್ರಕ್ಕಿಂಗ್ ಮಾಡದಂತೆ ಕೂಡ ಆದೇಶ ನೀಡಲಾಗಿದೆ.

ಇನ್ನು ರಾಜ್ಯದ ಅತಿ ಎತ್ತರದ ಪ್ರದೇಶಕ್ಕೆ ಪ್ರವೇಶ ಮುಳ್ಳಯ್ಯನಗಿರಿಗೂ ಪ್ರವೇಶ ನಿಷೇಧಿಸಿ ಡಿಸಿ ಆದೇಶ ನೀಡಿದ್ದಾರೆ. ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಆದೇಶ ನೀಡಿದ್ದಾರೆ.ಸತತ ಮಳೆಯಿಂದ ಮುಳ್ಳಯ್ಯನಗಿರಿಯಲ್ಲಿ ಗುಡ್ಡಕುಸಿತವಾಗಿದೆ.ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಪ್ರವೇಶ ನಿರ್ಬಂಧಿಸಲಾಗಿದೆ.ಕೆಲ ದಿನಗಳಿಂದ ಮುಳ್ಳಯ್ಯನಗಿರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸ್ತಿದ್ದಾರೆ. ಹಾಗಾಗಿ ಜುಲೈ 22ರವರೆಗೆ ಪ್ರವಾಸಿಗರು ಬರದಂತೆ ಸೂಚನೆ ನೀಡಲಾಗಿದೆ

- Advertisement -

Latest News

error: Content is protected !!