Friday, June 26, 2026
Homeಕರಾವಳಿಮಂಗಳೂರುಕಡಬ; ಕಾಣಿಯೂರಿನಲ್ಲಿ ಸೋಮವಾರ ಸಂಜೆಯಿಂದ ಯುವಕ ನಾಪತ್ತೆ; ಹೊಳೆಗೆ ಹಾರಿರುವ

ಕಡಬ; ಕಾಣಿಯೂರಿನಲ್ಲಿ ಸೋಮವಾರ ಸಂಜೆಯಿಂದ ಯುವಕ ನಾಪತ್ತೆ; ಹೊಳೆಗೆ ಹಾರಿರುವ

- Advertisement -
- Advertisement -

ಕಡಬ; ಕಾಣಿಯೂರಿನಲ್ಲಿ ಸೋಮವಾರ ಸಂಜೆಯಿಂದ ಯುವಕನೊಬ್ಬ ನಾಪತ್ತೆಯಾಗಿದ್ದು ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಕಾಯಿಮಣ ಗ್ರಾಮದ ನಾಯಿತ್ತಡ್ಕ ನಿವಾಸಿ ಹುಕ್ರ ಎಂಬವರ ಪುತ್ರ ಸುರೇಶ್ (40) ನಾಪತ್ತೆಯಾದ ಯುವಕ.ಸುರೇಶ್ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು , ಆತ ಹೊಳೆಗೆ ಹಾರಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದು, ವಿಪರಿತ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಸರಿಯಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.

ಸುರೇಶ್ ಸೋಮವಾರ ರಾತ್ರಿ ಸುಮಾರು 8-30 ರ ವೇಳೆಗೆ ಮನೆಯಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೋದವರು ಮಂಗಳವಾರ ಬೆಳಿಗ್ಗೆ 9 ಗಂಟೆಯಾದರೂ ಮನೆಗೆ ವಾಪಾಸ್ ಬಂದಿರಲಿಲ್ಲ . ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ . ಹೀಗಾಗಿ ಅವರ ಸಹೋದರ ಚಿದಾನಂದ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಸುರೇಶ್ ಅವರನ್ನು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಕಾಪೆಜಾಲು ಹೊಳೆ ಬದಿಯಲ್ಲಿ ಶರ್ಟ್ ಮತ್ತು ಛತ್ರಿ ಪತ್ತೆಯಾಗಿದ್ದು, ಸುರೇಶ್ ಹೊಳೆಗೆ ಬಿದ್ದಿರಬಹುದು ಎನ್ನು‌ವ ಸಂಶಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಸುರೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೊಳೆ ನೀರಿನಲ್ಲಿ ನಿನ್ನೆ ಸಂಜೆ ತನಕ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ . ಸ್ಥಳಕ್ಕೆ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ ಮುಂತಾದವರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!