Monday, June 8, 2026
Homeಕರಾವಳಿಉಡುಪಿಕುಂದಾಪುರ : ಮುಗುಚಿ ಬಿದ್ದ ಮೀನುಗಾರಿಕಾ ದೋಣಿ ;ಓರ್ವ ಮೀನುಗಾರನ ಮೃತದೇಹ ಪತ್ತೆ!

ಕುಂದಾಪುರ : ಮುಗುಚಿ ಬಿದ್ದ ಮೀನುಗಾರಿಕಾ ದೋಣಿ ;ಓರ್ವ ಮೀನುಗಾರನ ಮೃತದೇಹ ಪತ್ತೆ!

- Advertisement -
- Advertisement -

ಬೈಂದೂರು:ದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರಲ್ಲಿ ಒಬ್ಬನ ಮೃತದೇಹ ಶನಿವಾರ ಪತ್ತೆಯಾಗಿದೆ.

ದೋಣಿ ಮಗುಚಿ ನಾಪತ್ತೆಯಾಗಿದ್ದ ಮೀನುಗಾರ ಕಚಕನ ಮನೆಯ ವಾಸು ಖಾರ್ವಿ ಅವರ ಪುತ್ರ ಚರಣ್ ಖಾರ್ವಿ (25) ಅವರ ಪಾರ್ಥಿವ ಶರೀರವು ಸಮುದ್ರ ತೀರದಲ್ಲಿ ಅಮ್ಮನವರ ತೋಪ್ಪಲು ಪ್ರದೇಶದಲ್ಲಿ ಪತ್ತೆಯಾಗಿದೆ.

ಬೈಂದೂರು ತಾಲೂಕು ಪಡುವರಿ ಗ್ರಾಮದ ತಾರಪತಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿದ್ದು,ಅಲ್ಲಿಂದ ಮರಳಿ ಅಳ್ವೆಕೋಡಿಗೆ ಬರುತ್ತಿದ್ದ ವೇಳೆ ನಾಡಾದೋಣಿ ಶುಕ್ರವಾರ ಸಂಜೆ ಮಗುಚಿ ಬಿದ್ದು ದುರಂತ ಸಂಭವಿಸಿತ್ತು. ನಾಪತ್ತೆಯಾದ ಇಬ್ಬರು ಮೀನುಗಾರರಲ್ಲಿ ಚರಣ್ ಅವರು ಒಬ್ಬರಾಗಿದ್ದರು.

ದೋಣಿಯಲ್ಲಿದ್ದ ಇತರೆ ನಾಲ್ಕೈದು‌ ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರಿದ್ದಾರೆ. ದುರಂತ ಸಂಭವಿಸಿದಾಗ ಅವರು ‘ಜೈ ಗುರೂಜಿ’ ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು.ಇನ್ನು ನಾಪತ್ತೆಯಾಗಿರುವ ಅಣ್ಣಪ್ಪ ಮೊಗವೀರರ ಪತ್ತೆಗೆ ಹುಡುಕಾಟ ಮುಂದುರಿಸಿದ್ದಾರೆ.

- Advertisement -

Latest News

error: Content is protected !!