Friday, June 26, 2026
Homeತಾಜಾ ಸುದ್ದಿಸಂಸತ್ ಭವನದ ಕ್ಯಾಂಟೀನ್ನಲ್ಲಿ ಇನ್ನುಮುಂದೆ ಸಂಸದರಿಗಿಲ್ಲ ಆಹಾರ ಸಬ್ಸಿಡಿ

ಸಂಸತ್ ಭವನದ ಕ್ಯಾಂಟೀನ್ನಲ್ಲಿ ಇನ್ನುಮುಂದೆ ಸಂಸದರಿಗಿಲ್ಲ ಆಹಾರ ಸಬ್ಸಿಡಿ

- Advertisement -
- Advertisement -

ನವದೆಹಲಿ: ಈಹಿಂದೆ ಸಂಸತ್ ಭವನದ ಕ್ಯಾಂಟೀನ್ನಲ್ಲಿ ಸಂಸದರಿಗೆ ಆಹಾರ ಸಬ್ಸಿಡಿ ಒದಗಿಸಲಾಗಿತ್ತು. ಆದರೆ ಈಗ ಈ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಆಹಾರ ಸಬ್ಸಿಡಿ ರದ್ದುಗೊಳಿಸಬೇಕೆಂದು ಬೇಡಿಕೆ ಇತ್ತು. ಈಗ ಸಂಸದರು ಮತ್ತು ಇತರರಿಗೆ ಸಂಸತ್ ಕ್ಯಾಂಟೀನ್ನಲ್ಲಿ ನೀಡುವ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇನ್ನು ಮುಂದೆ ನಿಗದಿತ ಬೆಲೆಗೆ ಸಂಸತ್ ಕ್ಯಾಂಟೀನ್ನಲ್ಲಿ ಊಟ, ತಿಂಡಿ ಲಭ್ಯವಿರುತ್ತದೆ. ಇದರಿಂದ 17 ಕೋಟಿ ರೂ.ಗೂ ಅಧಿಕ ಮೊತ್ತ ಉಳಿತಾಯವಾಗಲಿದೆ.

- Advertisement -

Latest News

error: Content is protected !!