Saturday, April 20, 2024
Homeಕರಾವಳಿಸೂರ್ಯ ಗ್ರಹಣ ಹಿನ್ನೆಲೆ; ಇಂದು ದ.ಕ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಇಲ್ಲ

ಸೂರ್ಯ ಗ್ರಹಣ ಹಿನ್ನೆಲೆ; ಇಂದು ದ.ಕ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಇಲ್ಲ

spot_img
- Advertisement -
- Advertisement -

ಮಂಗಳೂರು: ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಮತ್ತು ಅನ್ನ ಪ್ರಸಾದ ವ್ಯವಸ್ಥೆ ಇರುವುದಿಲ್ಲ.

ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 2.30ರಿಂದ ರಾತ್ರಿ 7.30 ರವರೆಗೆ ದೇವರ ದರ್ಶನ ಸಂಪೂರ್ಣ ಬಂದ್ ಆಗಿರಲಿದ್ದು, ರಾತ್ರಿ 7.30ರ ಬಳಿಕ ದೇವರ ದರ್ಶನಕ್ಕೆ ಅವಕಾಶ ಮತ್ತು ರಾತ್ರಿ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ.‌

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಸೇವೆಗಳು ಮತ್ತು ಅನ್ನ ಪ್ರಸಾದ ಬಂದ್ ಆಗಿರಲಿದೆ.‌ ಬುಧವಾರ ಬೆಳಿಗ್ಗೆಯಿಂದ ಸೇವೆಗಳು ಮತ್ತು ದೇವರ ದರ್ಶನ ಆರಂಭವಾಗಲಿದೆ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಸೇವೆಗಳು ಮತ್ತು ಅನ್ನ ಪ್ರಸಾದ ಇರುವುದಿಲ್ಲ. ಆದರೆ ದೇವರ ದರ್ಶನ ಇರಲಿದೆ. ಆದರೆ ವಿಶೇಷ ಸೇವೆ ಮತ್ತು ಪೂಜೆಗಳು ಇರುವುದಿಲ್ಲ.

ಗ್ರಹಣ ಸ್ಪರ್ಶ ಕಾಲ ಸಂಜೆ 5.09 ಗಂಟೆ ಆಗಿದ್ದು, ಗ್ರಹಣ ಮೋಕ್ಷ ಕಾಲ ಸಂಜೆ 6.07 ಗಂಟೆ ಆಗಿರಲಿದೆ.

- Advertisement -
spot_img

Latest News

error: Content is protected !!