Saturday, June 6, 2026
Homeಕರಾವಳಿಕಡಬ; ಕಾಣಿಯೂರಿನಲ್ಲಿ‌ ಮಹಿಳೆಯ ಮಾನಭಂಗಕ್ಕೆ ಯತ್ನ ಆರೋಪ: ಸಂತ್ರಸ್ತ ಮಹಿಳೆಯ ಮನೆಗೆ ಸಚಿವ ಅಂಗಾರ ಭೇಟಿ

ಕಡಬ; ಕಾಣಿಯೂರಿನಲ್ಲಿ‌ ಮಹಿಳೆಯ ಮಾನಭಂಗಕ್ಕೆ ಯತ್ನ ಆರೋಪ: ಸಂತ್ರಸ್ತ ಮಹಿಳೆಯ ಮನೆಗೆ ಸಚಿವ ಅಂಗಾರ ಭೇಟಿ

- Advertisement -
- Advertisement -

ಕಡಬ; ಬಟ್ಟೆ ಮಾರಲು ಬಂದ ಇಬ್ಬರು ಆರೋಪಿಗಳು ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಹಿನ್ನೆಲೆ ಸಂತ್ರಸ್ತ ಮಹಿಳೆಯ ನಿವಾಸಕ್ಕೆ ಮೀನುಗಾರಿಕಾ ಸಚಿವ ಎಸ್.ಅಂಗಾರ ಭೇಟಿ ನೀಡಿ ಮಹಿಳೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಕಾಣಿಯೂರು ಸಮೀಪದ ದೋಳ್ಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು,ಬಟ್ಟೆ ವ್ಯಾಪಾರದ ನೆಪದಲ್ಲಿ ರಫೀಕ್ ಮತ್ತು ರಮಿಯಾಸುದ್ಧೀನ್ ಎನ್ನುವವರು ದಲಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ‌ ಕೇಳಿ‌ಬಂದಿತ್ತು.

ಇನ್ನು ಸಾರ್ವಜನಿಕರು ರಫೀಕ್ ಮತ್ತು ರಮಿಯಾಸುದ್ಧೀನ್ ಗೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳ್ಳಾರೆ‌ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!