Sunday, June 7, 2026
Homeತಾಜಾ ಸುದ್ದಿಶಿಕ್ಷಕರ ನೇಮಕಾತಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ:ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

ಶಿಕ್ಷಕರ ನೇಮಕಾತಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಇಲ್ಲ:ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಮೇ ತಿಂಗಳ 21 ಮತ್ತು 22 ರಂದು ಶಿಕ್ಷಕ ನೇಮಕಾತಿ ಪರೀಕ್ಷೆ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಚಿವ ನಾಗೇಶ್, ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರೂ ವದಂತಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 1,06,083 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದು, 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರದಲ್ಲಿ ಗಡಿಯಾರ ಶಿಕ್ಷಣ ಇಲಾಖೆಯೇ ಅಳವಡಿಸಲಿದ್ದು, ವಾಚ್‌ ಕೂಡಾ ತರುವ ಹಾಗೆ ಇಲ್ಲ. ಅಲ್ಲದೇ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳು ಇರುತ್ತದೆ.

ಒಂದು ಪರೀಕ್ಷಾ ಕೊಠಡಿಯಲ್ಲಿ 20 ಜನ ಅಭ್ಯರ್ಥಿಗಳು ಮಾತ್ರ ಇರಲಿದ್ದು, ಒಂದು ಗಂಟೆ‌ ಮೊದಲು ಅಭ್ಯರ್ಥಿಗಳು ಕೇಂದ್ರಕ್ಕೆ ಬರಬೇಕು.

ಪ್ರತಿ ಕೇಂದ್ರಕ್ಕೂ ತಹಶಿಲ್ದಾರ್ ಮೇಲ್ಪಟ್ಟ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು. ಅಭ್ಯರ್ಥಿಗಳು ಪೂರ್ಣ ಸ್ಕ್ರೀನ್ ಆದ ಮೇಲೆ ಅಭ್ಯರ್ಥಿಗಳು ಕೊಠಡಿಗೆ ಹೋಗಬೇಕಾಗಿದೆ.

- Advertisement -

Latest News

error: Content is protected !!