Friday, April 26, 2024
HomeUncategorizedಬೆಂಗಳೂರು :ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪುಸ್ತಕ ಮುಕ್ತ ದಿನ

ಬೆಂಗಳೂರು :ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪುಸ್ತಕ ಮುಕ್ತ ದಿನ

spot_img
- Advertisement -
- Advertisement -

ಬೆಂಗಳೂರು; ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕೇಂದ್ರ ಸರಕಾರ ವಿಧಿಸಿರುವ ಶಾಲಾ ಬ್ಯಾಗ್ ನೀತಿಯನ್ನು ಪಾಲಿಸಲಾಗುತ್ತದೆ. NCERT ಕಾರ್ಯಸೂಚಿಯನ್ನು ಪರಿಗಣಿಸಿಕೊಂಡು,  ಶಾಲಾ ಬ್ಯಾಗ್ ಗಳ ತೂಕವು ಮಕ್ಕಳ ದೇಹ ತೂಕದ 10% ಗಿಂತ ಕಡಿಮೆ ಇರುತ್ತದೆ.

ಇದಲ್ಲದೇ ಶಾಲೆಯಲ್ಲಿ ಆಗಾಗ ಶಾಲಾ  ಬ್ಯಾಗುಗಳ ತೂಕವನ್ನು ಅಳೆಯಲಾಗುತ್ತದೆ. ನಿಗದಿಪಡಿಸಿದಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ತರುವ ಮಕ್ಕಳಿಗೆ ತಿಳಿ ಹೇಳಲಾಗುತ್ತದೆ. ಜೊತೆಗೆ ಮನೆಯಿಂದ ಇತರ ವಸ್ತುಗಳನ್ನು ತಂದಿದ್ದರೆ ಪೋಷಕರಿಗೂ ಕರೆ ಮಾಡಿ ತಿಳಿಸಲಾಗುತ್ತದೆ. ಇದಕ್ಕೆ ಪೂರಕವಾಗಿ “No Book Day”  ಅರ್ಥಾತ್  ಪುಸ್ತಕ ಮುಕ್ತ ದಿನವನ್ನು  ಶಾಲೆಯಲ್ಲಿ ಆಚರಿಸಲಾಗುತ್ತದೆ. ವಾರಕ್ಕೊಮ್ಮೆ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿಮುಕ್ತ ದಿನವನ್ನು ಆಯೋಜಿಸಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು  ಶಾಲಾ ಬ್ಯಾಗನ್ನು ಮನೆಯಲ್ಲಿಯೇ ಬಿಟ್ಟು ಕೇವಲ ಊಟದ ಬುತ್ತಿಯನ್ನು ತರುತ್ತಾರೆ.

ಈ ದಿನವನ್ನು ಪ್ರಾಯೋಗಿಕ ಹಾಗೂ ಅನುಭವದ ಕಲಿಕೆಗೆ ಮೀಸಲಿಟ್ಟಿದ್ದು, ಚಟುವಟಿಕೆಗಳನ್ನು ನಡೆಸಲು ಕಿಟ್ ಗಳನ್ನು ಬಳಸಲಾಗುತ್ತದೆ. ಈ ಕಿಟ್ ಶಾಲೆಯಲ್ಲಿಯೇ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು  ಶಾಲೆಯಲ್ಲಿಯೇ ನೀಡಲಾಗುತ್ತದೆ.  ಈ ಚಟುವಟಿಕೆಗಳು ವಿದ್ಯಾರ್ಥಿಗಳ ಪಠ್ಯಕ್ಕೆ ಪೂರಕವಾಗಿದ್ದು , ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೀಗಾಗಿ ಪುಸ್ತಕ ಮುಕ್ತ ದಿನದಂದು ವಿದ್ಯಾರ್ಥಿಗಳು ತಮ್ಮ‌ ಕಲಿಕೆಯ ಮೇಲೆ ಪ್ರಭಾವ ಬೀರುವ ವಿಚಾರಗಳನ್ನು ಮೋಜಿನೊಂದಿಗೆ ಕಲಿಯುತ್ತಾರೆ.

ಪುಸ್ತಕ ಮುಕ್ತ ದಿನದ ಮಹತ್ವ:

*ಮಕ್ಕಳಿಗೆ ಪುಸ್ತಕ ಮುಕ್ತ ದಿನದಂದು ಇತರ ಚಟುವಟಿಕೆಗಳಲ್ಲಿ  ಭಾಗವಹಿಸುವಂತೆ ಉತ್ತೇಜನ ನೀಡುವುದು.

* ಪುಸ್ತಕದ ಹೊರೆಯನ್ನು ಕಡಿಮೆ ಮಾಡುವುದು.

*ಮನೋ ರಂಜನೆಯ ಮೂಲಕ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಕೊಂಡು ಮೋಜಿನ ಮೂಲಕ ಪಾಠಗಳನ್ನು ಕಲಿಯುತ್ತಾರೆ.

* ಹಾಡುತ್ತಾ ನಲಿಯುತ್ತಾ ಚಟುವಟಿಕೆಯ ಮೂಲಕ ಕಲಿತ ಪಾಠಗಳು ಮಕ್ಕಳ ಮನಸ್ಸಿನಲ್ಲಿ ದೀರ್ಘಕಾಲದವರೆಗೂ ಉಳಿಯುತ್ತದೆ.

*ಮಕ್ಕಳಲ್ಲಿ ಭಾಷಾ ಸಾಮರ್ಥ್ಯದ ಜೊತೆಗೆ ವಿವಿಧ ವಿಷಯಗಳ ಸಾಮರ್ಥ್ಯದ (ನೃತ್ಯ ,ಕಥೆ ಹೇಳುವ, ಅಭಿನಯ ಇತ್ಯಾದಿ) ಬೆಳವಣಿಗೆಯಾಗುತ್ತದೆ.

* ಹಲವು ವಿಚಾರಗಳಲ್ಲಿ ಮಕ್ಕಳ ಕೌಶಲ್ಯತೆ ವೃದ್ಧಿಸುತ್ತವೆ.

* ತರಗತಿಯ ಎಲ್ಲಾ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ  ಭಾಗವಹಿಸುತ್ತಾರೆ. ಇದರಿಂದ ಕಲಿಕೆ ಸಫಲವಾಗುತ್ತದೆ.

- Advertisement -
spot_img

Latest News

error: Content is protected !!