Sunday, June 7, 2026
HomeUncategorizedಉಡುಪಿ: “ಮಿಥುನ್ ರೈ ಎಲ್ಲಿದ್ದಾರೆ? ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ”: ಕಾಂಗ್ರೆಸ್ ನಾಯಕ ಮಿಥುನ್...

ಉಡುಪಿ: “ಮಿಥುನ್ ರೈ ಎಲ್ಲಿದ್ದಾರೆ? ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ”: ಕಾಂಗ್ರೆಸ್ ನಾಯಕ ಮಿಥುನ್ ರೈ ಅವರಿಗೆ ಶೋಭಾ ಕರಂದ್ಲಾಜೆ ತಿರುಗೇಟು

- Advertisement -
- Advertisement -

ಉಡುಪಿ: ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡವರಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರ ಹೇಳಿಕೆ ಶೋಭಾ ಕರಂದ್ಲಾಜೆ ತಿರುಗೇಟು ಕೊಟ್ಟಿದ್ದಾರೆ. ಮಿಥುನ್ ರೈ ಎಲ್ಲಿದ್ದಾರೆ? ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ ಎಂದು ಸವಾಲೆಸೆದಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ ತೆಗೆಯಿರಿ. ಅವ ಎಲ್ಲಿ ಮಿಥುನ್ ರೈ ಅವನು ಬರಲಿ ಎಂದು ಸಚಿವೆ ಗರಂ ಆಗಿ ಹೇಳಿದ್ದಾರೆ. ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ. ಅವನು ಮಿಥುನ್ ರೈ ಫಸ್ಟ್ ಬರಲಿ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ವಾಗ್ದಾಳಿ ನಡೆಸಿ ಶೋಭಾ ಕರಂದ್ಲಾಜೆ ಕಾರು ಹತ್ತಿದರು.

- Advertisement -

Latest News

error: Content is protected !!