Monday, June 8, 2026
Homeಕರಾವಳಿಬಂಟ್ವಾಳ ತಾಲ್ಲೂಕು ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾಗಿ ನಿಶಾನ್ ಆಳ್ವ ಸುಜೀರುಗುತ್ತು ಆಯ್ಕೆ

ಬಂಟ್ವಾಳ ತಾಲ್ಲೂಕು ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾಗಿ ನಿಶಾನ್ ಆಳ್ವ ಸುಜೀರುಗುತ್ತು ಆಯ್ಕೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲ್ಲೂಕು ಬಂಟರ ಸಂಘ ಯುವ ವಿಭಾಗದ ನೂತನ ಪದಾಧಿಕಾರಿಗಳ ಆಯ್ಕೆ ಬಂಟವಾಳದ ಬಂಟರ ಭವನದಲ್ಲಿ ಜರುಗಿತು.

ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರಂಗೋಲಿ ಇವರ ಅಧ್ಯಕ್ಷತೆಯಲ್ಲಿ ನಡೆದ ಯುವ ವಿಭಾಗದ ಕಾರ್ಯಕಾರಿಣಿ ಸದಸ್ಯರ‌ ಸಭೆಯಲ್ಲಿ ನಿಶಾನ್ ಆಳ್ವ, ಸುಜೀರುಗುತ್ತು ಇವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಕರುಣ್ ಶೆಟ್ಟಿ, ಕಾರ್ಯದರ್ಶಿಯಾಗಿ ಗೋಕುಲ್ ಭಂಡಾರಿ, ಖಜಾಂಚಿಯಾಗಿ ಶುಭಕರ್ ಮಾರ್ಥ ಮತ್ತು ಜೊತೆ ಕಾರ್ಯದರ್ಶಿಯಾಗಿ ದೀಪಕ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಗೊಂಡರು.

- Advertisement -

Latest News

error: Content is protected !!