Friday, June 5, 2026
Homeಕರಾವಳಿವಿಟ್ಲದಲ್ಲಿ ಬಾವಿಗೆ ಹಾರಿ ನವವಿವಾಹಿತ ಆತ್ಮಹತ್ಯೆ

ವಿಟ್ಲದಲ್ಲಿ ಬಾವಿಗೆ ಹಾರಿ ನವವಿವಾಹಿತ ಆತ್ಮಹತ್ಯೆ

- Advertisement -
- Advertisement -

ವಿಟ್ಲ;  ಬಾವಿಗೆ ಹಾರಿ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಜೆಯಲ್ಲಿ ನಡೆದಿದೆ.

ಪ್ರಶಾಂತ್ ನಾಯ್ಕ್ (29)  ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಶಾಂತ್ ನೇರಳಕಟ್ಟೆ ಅಗ್ರಿ ಎಂಬ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು,  ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದರು . ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದ ಅವರು ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದರು.

ಕೌಟುಂಬಿಕ ಕಲಹ ಪ್ರಶಾಂತ್ ಆತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!